ಮಹಾಶಿವರಾತ್ರಿ ಮಹೋತ್ಸವ: ಮಹಿಳೆಯರೇ ಎಳೆಯುವ ವಿಶಿಷ್ಠ ರಥೋತ್ಸವ!
ವಿಜಯಪುರ: ಮಹಾಶಿವರಾತ್ರಿ ಮಹೋತ್ಸವ ಹಿನ್ನೆಲೆ ನಗರದ ಹೊರವಲಯದ ಶಿವಗಿರಿಯಲ್ಲಿ ಮಹಾ ರಥೋತ್ಸವ ನಡೆಯಿತು. ಮಹಿಳೆಯರೇ ಎಳೆಯುವ ವಿಶಿಷ್ಠ ರಥೋತ್ಸವ ಇದಾಗಿದೆ. 85 ಅಡಿ ಎತ್ತರದ ಶಿವನಮೂರ್ತಿ ಸ್ಥಾಪಿಸಿದ ನಂತರ ಪ್ರತಿ ವರ್ಷ ಶಿವರಾತ್ರಿ ದಿನ ಸಂಜೆ ರಥೋತ್ಸವ ನಡೆಯುತ್ತದೆ. ಸೀರೆಯಲ್ಲಿ ಕಂಗೊಳಿಸುವ ನಾರಿಯರು ರಥ ಎಳೆಯುವ ಮುನ್ನ ದೇವರಿಗೆ ವಿಶೇಷ ಪೂಜೆಯನ್ನು ವಿವಿಧ ಸ್ವಾಮೀಜಿಗಳು ನೇರವೇರಿಸಲಿದ್ದಾರೆ. ನಂತರ ಕಡೆ ಕಡೆ ವೀರಭದ್ರೇಶ್ವರ ಕುಣಿತ ನಡೆಯಲಿದೆ. ಈ ವೇಳೆ ರಥದ ಮೇಲೆ ಉತ್ತತ್ತಿ, ಬಾಳೆಹಣ್ಣು, ಪತ್ರಿ, ದ್ರಾಕ್ಷಿ, ಕರ್ಜೂರ ಎಸೆದು ತಮ್ಮ ಭಕ್ತಿ ಸಮರ್ಪಿಸುತ್ತಾರೆ.