ನಮ್ಮೂರಿಗೆ ಕಳುಹಿಸಿಕೊಡಿ ಎಂದು ಗೋಗರಿಯುತ್ತಿರುವ ಮಧ್ಯಪ್ರದೇಶದ ಕೂಲಿ ಕಾರ್ಮಿಕರು
ಕಲಬುರಗಿ: ರೈಲ್ವೆ ಹಳಿ ರಿಪೇರಿ ಕೆಲಸಕ್ಕೆಂದು ಬಂದಿರುವ ಮಧ್ಯಪ್ರದೇಶದ 25 ಮಂದಿ ಕೂಲಿ ಕಾರ್ಮಿಕರು, ಜಿಲ್ಲೆಯ ಚಿತ್ತಾಪುರ ತಾಲೂಕಿನ ವಾಡಿ ಪಟ್ಟಣದಲ್ಲಿ ಲಾಕ್ಡೌನ್ಗೆ ಸಿಲುಕಿ ಪರಾದಾಡುತ್ತಿದ್ದಾರೆ. ರೈಲ್ವೆ ಟ್ರ್ಯಾಕ್ ರಿಪೇರಿ ಹಾಗೂ ಸ್ಲೀಪರ್ ಜೋಡಣೆ ಕಾಮಗಾರಿಯ ಗುತ್ತಿಗೆದಾರನೊಬ್ಬ ಮಧ್ಯಪ್ರದೇಶದ ಚಿನ್ನವಾಡ ಜಿಲ್ಲೆಯ ರಹೇಪ ಗ್ರಾಮದವರಾದ ಈ ಕಾರ್ಮಿಕರನ್ನು ಐದು ತಿಂಗಳ ಹಿಂದೆಯೇ ವಾಡಿ ನಗರಕ್ಕೆ ಕರೆಸಿಕೊಂಡು ಅವರಿಗೆ ಅರ್ಧ ಸಂಬಳವನ್ನು ಮಾತ್ರ ನೀಡಿ ಎಸ್ಕೇಪ್ ಆಗಿದ್ದಾನೆ. ಕಾರ್ಮಿಕರು ಕಾಲೋನಿಯ ಮುರುಕು ಕಟ್ಟಡದ ಕೆಳಗೆ ತಮ್ಮ ಕುಟುಂಬದೊಂದಿಗೆ ರೈಲ್ವೆ ಅಧಿಕಾರಿಗಳು ನೀಡುತ್ತಿರುವ ಕಿಚಡಿ ತಿಂದು ಜೀವನ ಸಾಗಿಸುತ್ತಿದ್ದು, ನಮ್ಮನ್ನು ನಮ್ಮೂರಿಗೆ ಕಳುಹಿಸಿಕೊಡಿ ಎಂದು ಕೇಳಿಕೊಳ್ಳುತ್ತಿದ್ದಾರೆ.
Last Updated : Mar 31, 2020, 7:42 PM IST