ಕರ್ನಾಟಕ

karnataka

ETV Bharat / videos

ನೆರೆ ಪರಿಹಾರ ಅಂದ್ರೆ ಗರಂ ಆದ ಸಚಿವರು : ಸಿಎಂ ಮನಸ್ಥಿತಿ ನನಗೇನಪ್ಪ ಗೊತ್ತು ಎಂದ ಮಾಧುಸ್ವಾಮಿ - Hubli latest news

By

Published : Sep 30, 2019, 7:58 PM IST

ಹುಬ್ಬಳ್ಳಿಯ ನವನಗರದಲ್ಲಿ‌ ನಿರ್ಮಾಣವಾದ ಕರ್ನಾಟಕ ರಾಜ್ಯ ಕಾನೂನು ವಿವಿಯ ನೂತನ ಕಟ್ಟಡಗಳ ಉದ್ಘಾಟನೆ ಕಾರ್ಯಕ್ರಮಕ್ಕೆ ಆಗಮಿಸಿ ಸುದ್ದಿಗಾರೊಂದಿಗೆ ಮಾತನಾಡಿದ ಸಚಿವ ಮಾಧುಸ್ವಾಮಿ, ಬಿಎಸ್ ವೈ 'ತಂತಿ' ಮೇಲಿನ ನಡುಗೆ ಹೇಳಿಕೆಗೆ ಪ್ರತಿಕ್ರಿಯಿಸಿ, ಮುಖ್ಯಮಂತ್ರಿಗಳು ಯಾವ ವಿಚಾರವಾಗಿ ಆ ರೀತಿ ಹೇಳಿದ್ದರೋ ಗೊತ್ತಿಲ್ಲ. ಆ ಪ್ರಶ್ನೆ ಅವರಿಗೇ ಕೇಳಬೇಕು ಎಂದರು. ಕೇಂದ್ರ ಸರ್ಕಾರದಿಂದ ಈವರೆಗೆ ನೆರೆ ಪರಿಹಾರ ಬಿಡುಗಡೆಯಾಗಿಲ್ಲ ಎಂಬ ಮಾಧ್ಯಮದವರ ಪ್ರಶ್ನೆಗೆ ಗರಂ ಆಗಿಯೇ ಸಚಿವರು ಉತ್ತರಿಸಿದರು. ಮಹದಾಯಿ ವಿಚಾರವಾಗಿ ನೋಟಿಫಿಕೇಷನ್ ಹೊರಡಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

ABOUT THE AUTHOR

...view details