ಮಾತಾ ಮಾಣಿಕೇಶ್ವರಿ ಅಮ್ಮ ಶಿವೈಕ್ಯ.. ನಡೆದಾಡಿದ ದೈವ ಅಗಲಿಕೆಗೆ ಗಣ್ಯರ ಸಂತಾಪ! - ಮಾತಾ ಮಾಣಿಕೇಶ್ವರಿ
ನಡೆದಾಡುವ ದೇವರು ಎಂದು ಪ್ರಸಿದ್ಧಿ ಪಡೆದ ಮಾತಾ ಮಾಣಿಕೇಶ್ವರಿ (87) ಅಮ್ಮನವರು ಶಿವೈಕ್ಯರಾದ ಹಿನ್ನೆಲೆ ಯಾನಗುಂದಿಯ ಮಾಣಿಕ್ಯಗಿರಿ ಆಶ್ರಮದಲ್ಲಿ ಅಂತಿಮ ದರ್ಶನದ ವ್ಯವಸ್ಥೆ ಮಾಡಲಾಗಿದೆ. ರಾಜ್ಯ ಸೇರಿದಂತೆ ಆಂಧ್ರಪ್ರದೇಶ, ತೆಲಂಗಾಣ, ಮಹಾರಾಷ್ಟ್ರ ದಿಂದ ಭಕ್ತ ಸಮೂಹ ಹರಿದು ಬರುತ್ತಿದೆ. ಮಾತೆಯ ಅಂತಿಮ ದರ್ಶನ ಪಡೆದು ಪುನೀತರಾಗುತ್ತಿದ್ದಾರೆ. ಗಣ್ಯರು ಸಹ ಅಮ್ಮನ ಅಂತಿಮ ದರ್ಶನ ಪಡೆದರು. ಇದೆ ವೇಳೆ ಈಟಿವಿ ಭಾರತದೊಂದಿಗೆ ಮಾತನಾಡಿದ ಸಂಸದ ಉಮೇಶ ಜಾಧವ್, ಜೇವರ್ಗಿ ಶಾಸಕ ಅಜಯಸಿಂಗ್, ವಿಧಾನ ಪರಿಷತ್ ಸದಸ್ಯ ತಿಪ್ಪಣಪ್ಪ ಕಮಕನೂರ್ ಮಾಣಿಕ್ಯಗಿರಿಯಲ್ಲಿ ತಮಗಾದ ಅನುಭವದ ಬಗ್ಗೆ ಹೇಳಿದ್ದು ಹೀಗೆ.