ಅತಿರೇಕದ ಅಭಿಮಾನ... ಚಾಕುವಿನಿಂದ ಎದೆಗೆ ಇರಿದುಕೊಂಡ ಎಂ.ಟಿ.ಬಿ ನಾಗರಾಜ್ ಬೆಂಬಲಿಗ - ಚಾಕುವಿನಿಂದ ಇರಿದುಕೊಂಡು ಹುಚ್ಚು ಅಭಿಮಾನ ಪ್ರದರ್ಶಿಸಿದ ಎಂ.ಬಿ.ಬಿ ನಾಗರಾಜ್ ಅಭಿಮಾನಿ
ಹೊಸಕೋಟೆಯಲ್ಲಿ ಅನರ್ಹ ಶಾಸಕ ಎಂಟಿಬಿ ನಾಗರಜ್ ಅವರ ಅಭಿಮಾನಿವೋರ್ವ ಅತಿರೇಕದ ವರ್ತನೆ ತೋರಿದ್ದಾನೆ. ಮೆರವಣಿಗೆ ವೇಳೆ ನಾಗರಾಜ್ ಅವರು ಮಾಧ್ಯಮಗಳ ಜತೆ ಮಾತನಾಡುತ್ತಿದ್ದ ಸಮಯದಲ್ಲಿ, ನಗರದ ನಿವಾಸಿ, ಬೇಬಿ ಮಂಜು ಎಂಬ ವ್ಯಕ್ತಿ ಏಕಾಏಕಿ ಎದೆಯ ಬಲ ಭಾಗಕ್ಕೆ ಚಾಕುವಿನಿಂದ ಇರಿದುಕೊಂಡು ಹುಚ್ಚು ಅಭಿಮಾನ ಪ್ರದರ್ಶಿಸಿದ್ದಾನೆ. ಅಲ್ಲದೆ, ಎಂಟಿಬಿ ನಾಗರಾಜ್ ಅವರ ಮೇಲೆ ಇಟ್ಟಿರುವ ಅಭಿಮಾನಕ್ಕೆ ಇದೇ ಸಾಕ್ಷಿ ಎಂದು ಹೇಳಿದ್ದಾನೆ.