ವಿದ್ಯಾರ್ಥಿಯಾದ್ರೂ ಹೊಟ್ಟೆಪಾಡಿಗೆ ಪಾರ್ಟ್‌ಟೈಮ್ ವೃತ್ತಿ: ಉರಗ ಸಂರಕ್ಷಣೆಯೇ ಪ್ರವೃತ್ತಿ! - ಹಾವನ್ನು ರಕ್ಷಿಸಿ ಕಾಡಿಗೆ ಬಿಡುವ ವಿದ್ಯಾರ್ಥಿ ನ್ಯೂಸ್
ಹಾವೆಂದರೆ ಅದೆಷ್ಟೋ ಮಂದಿಗೆ ಎಲ್ಲಿಲ್ಲದ ಭಯ. ಆದ್ರೆ, ಇವರಿಗೆ ಹಾವುಗಳ ಮೇಲೆ ಅದೇನೋ ಮಮಕಾರ. ಪ್ರಾಣಿಗಳ ರಕ್ಷಣೆ ಮನುಷ್ಯ ಧರ್ಮವೆಂದು ಭಾವಿಸಿ, ತನಗೆ ಹಾವಿನ ಮಾಹಿತಿ ಬಂದ್ರೆ ಸಾಕು ಸ್ಥಳಕ್ಕೆ ಓಡೋಡಿ ಬಂದು ಅವುಗಳ ರಕ್ಷಣೆ ಮಾಡುವುದರ ಜೊತೆಗೆ ಜನಜಾಗೃತಿ ಮೂಡಿಸುತ್ತಿದ್ದಾರೆ.ಅಂದಹಾಗೆ ಇವರು, ರಾಯಚೂರು ಜಿಲ್ಲೆಯ ರಾಂಪುರ ಗ್ರಾಮದ ಎಂ.ಬಸವರಾಜ್ ಆರೋಲಿಕರ್. ಸ್ನೇಕ್ ಬಸವರಾಜ್ ಎಂದೇ ಖ್ಯಾತಿಯಾದ ಇವರು ವಿದ್ಯಾರ್ಥಿ. ಹೊಟ್ಟೆಪಾಡಿಗೆ ಪಾರ್ಟ್‌ಟೈಮ್ ಕೆಲಸ ಮಾಡ್ತಿದ್ದಾರೆ, ಜತೆಗೆ ಹಾವುಗಳನ್ನು ರಕ್ಷಣೆ ಮಾಡ್ತಿದ್ರೂ ಅದಕ್ಕಾಗಿ ಯಾರಿಂದಲೂ ಹಣ ಪಡೆಯುವುದಿಲ್ಲ. ಈವರೆಗೂ ರಸೂಲ್ ವೈಫರ್, ನಾಗರಹಾವು, ಸಸ್ಸ್ಕಿಲ್ ವೈಫರ್, ಗ್ರೇಟ್ ಸ್ನೇಕ್ ಹಾಗೂ ಕಿಂಗ್ ಕೋಬ್ರಾ ಸೇರಿ ನಾನಾ ವಿಷಕಾರಿ ಹಾವುಗಳನ್ನು ಸುರಕ್ಷಿತವಾಗಿ ಹಿಡಿದು ಅರಣ್ಯ ಪ್ರದೇಶಕ್ಕೆ ಬಿಟ್ಟಿದ್ದಾರಂತೆ.