ಹಿಂಡು ಹಿಂಡಾಗಿ ರಸ್ತೆ ದಾಟಿದ ಗಜ ಪಡೆಯ ದೃಶ್ಯ ಕಂಡು ರೋಮಾಂಚನಗೊಂಡ ರಸ್ತೆ ಸಂಚಾರಿಗಳು!
ತಮಿಳುನಾಡು-ಕರ್ನಾಟಕ ಗಡಿಯಲ್ಲಿ ಇಂದು ಸಂಜೆ ಆನೆ ಗುಂಪು ಹಿಂಡು ಹಿಂಡಾಗಿ ಕಾಡಿಂದ ಕಾಡಿಗೆ ಹೆಜ್ಜೆ ಹಾಕುವ ದೃಶ್ಯ ರಸ್ತೆ ಸಂಚಾರಿಗಳಿಗೆ ಅಚ್ಚರಿ ಮೂಡಿಸಿದೆ. ಅಂಚಟ್ಟಿ ಕಾಡಿನಲ್ಲಿ ಮಡಗರ್ ಎಂಬ ಗ್ರಾಮದ ರಸ್ತೆಯನ್ನು ಆನೆ ಪಡೆ ರಸ್ತೆ ದಾಟಿವೆ. ರಸ್ತೆಯಲ್ಲಿ ಹಾದು ಹೋದ ಟಾಟಾ ಏಸ್ ಕಾರ್ಮಿಕರು ಹಿಂದೆ ತಿರುಗಿ ನೋಡಿದಾಗ ದೈತ್ಯ ಆನೆ ಅವುಗಳ ಜತೆ ಆನೆ ಮರಿಗಳ ಹಿಂಡು ರಸ್ತೆ ದಾಟಿವೆ.