ಕರ್ನಾಟಕ

karnataka

ETV Bharat / videos

ಲಾರಿ ಚಾಲಕರಿಗೆ ಪರಿಹಾರ ನೀಡದೆ ಹೋದರೆ ಸರಕು ಸಾಗಾಟ ನಿಲ್ಲಿಸುತ್ತೇವೆ; ಲಾರಿ ಮಾಲೀಕರ ಸಂಘದ ಅಧ್ಯಕ್ಷ - Lorry Owners Association President

By

Published : May 7, 2020, 10:27 AM IST

ಬೆಂಗಳೂರು: ಆಟೋ ಚಾಲಕರು ಹಾಗೂ ಕ್ಯಾಬ್ ಚಾಲಕರಿಗೆ ಕೊರೊನಾ ಪರಿಹಾರ ಹಣ ನೀಡಿ, ಮ್ಯಾಕ್ಸಿ ಕ್ಯಾಬ್ ಹಾಗೂ ಲಾರಿ ಚಾಲಕರಿಗೆ ಪರಿಹಾರ ನೀಡಿಲ್ಲ. ಲಾರಿ ಚಾಲಕರು ಹಾಗೂ ಕ್ಯಾಬ್ ಚಾಲಕರ ನಡುವೆ ನಡುವೆ ಬೇಧವೇಕೆ? ಎಂದು ಲಾರಿ ಮಾಲೀಕರ ಸಂಘದ ಅಧ್ಯಕ್ಷ ಷಣ್ಮುಗಪ್ಪ, ಮುಖ್ಯಮಂತ್ರಿ ಯಡಿಯೂರಪ್ಪಗೆ ಪ್ರಶ್ನೆ ಮಾಡಿದ್ದಾರೆ. ಆಟೋ ಹಾಗೂ ಕ್ಯಾಬ್ ಚಾಲಕರಿಗೆ ಪರಿಹಾರ ಕೊಟ್ಟಿರೋದು ಒಳ್ಳೆಯದು. ಅದರೆ ಲಾರಿ ಹಾಗೂ ಮ್ಯಾಕ್ಸಿ ಕ್ಯಾಬ್ ಚಾಲಕರನ್ನು ಯಾಕೆ ನೀವು ಪರಿಗಣಿಸಿಲ್ಲ. ಲಾರಿ ಚಾಲಕರು ತಮ್ಮ ಜೀವವನ್ನು ಪಣಕ್ಕಿಟ್ಟು ಕೊರೊನಾ ಸಮಯದಲ್ಲಿ ದೇಶಾದ್ಯಂತ ಸರಕು ಸಾಗಣೆ ಮಾಡ್ತಿದ್ದಾರೆ. ಅವರಿಗೆ ಯಾಕೆ‌ ಪರಿಹಾರ ಕೊಟ್ಟಿಲ್ಲ. ಸರ್ಕಾರಕ್ಕೆ ಒಂದು ವಾರ ಗಡುವು ನೀಡುತ್ತೇವೆ. ಅಷ್ಟರಲ್ಲಿ ನಮಗೆ ಪರಿಹಾರ ನೀಡದೆ ಹೋದರೆ ಲಾರಿಗಳನ್ನು ರಸ್ತೆಗೆ ಇಳಿಸುವುದಿಲ್ಲ ಎಂದು ಲಾರಿ ಮಾಲೀಕರ ಸಂಘದ ಅಧ್ಯಕ್ಷ ಷಣ್ಮುಗಪ್ಪ ಸರ್ಕಾರಕ್ಕೆಎಚ್ಚರಿಕೆ ನೀಡಿದ್ದಾರೆ.

ABOUT THE AUTHOR

...view details