ರಾಯಚೂರು: ಹಾರುಬೂದಿ ಸಾಗಿಸಲು ಹೆದ್ದಾರಿಯಲ್ಲಿ ಸಾಲುಗಟ್ಟಿ ನಿಂತ ಲಾರಿಗಳು - raichur RTPS Shakti City
ರಾಯಚೂರು: ಶಕ್ತಿ ನಗರದ ಆರ್‌ಟಿಪಿಎಸ್‌ನಿಂದ ಹಾರುಬೂದಿಯನ್ನು ತೆಗೆದುಕೊಂಡು ಹೋಗಲು ಲಾರಿಗಳು ಸಾಲುಗಟ್ಟಿ ನಿಂತಿವೆ. ರಾಯಚೂರು-ಹೈದರಾಬಾದ್ ರಾಷ್ಟ್ರೀಯ ಹೆದ್ದಾರಿಯಲ್ಲಿ ಕಿಲೋ ಮೀಟರ್ಗಟ್ಟಲೇ ಹಲವು ಲಾರಿಗಳು ಸಾಲುಗಟ್ಟಿ ನಿಂತಿರುವುದರಿಂದ ಇದರಿಂದ ಹೆದ್ದಾರಿಯಲ್ಲಿ ವಾಹನ ದಟ್ಟಣೆ ಉಂಟಾಗಿದೆ. ಇಷ್ಟು ದಿನಗಳ ಕಾಲ ಆರ್‌ಟಿಪಿಎಸ್ ಬಂದ್‌ನಿಂದ ಹಾರುಬೂದಿ ಉತ್ಪಾದನೆ ಇರಲಿಲ್ಲ. ಇದೀಗ ವಿದ್ಯುತ್ ಉತ್ಪಾದನೆ ಆರಂಭವಾಗಿರುವುದರಿಂದ ಹಾರುಬೂದಿ ಪ್ರಮಾಣ ಹೆಚ್ಚುತ್ತಿದೆ. ಸಿಮೆಂಟ್ ಫ್ಯಾಕ್ಟರಿಯವರು ಹಾರುಬೂದಿಯನ್ನು ತೆಗೆದುಕೊಂಡು ಹೋಗಲು ಲಾರಿಗಳನ್ನು ಬಳಸುತ್ತಿರುವುದರಿಂದ ಹೆದ್ದಾರಿಯಲ್ಲಿ ವಾಹನ ದಟ್ಟಣೆ ಕಂಡುಬಂದಿದೆ.