ಚಿನ್ನದ ನಾಡಲ್ಲಿ ಹನಿ ನೀರಿಗೂ ಪರದಾಟ.. ನಲ್ಲಿ ತಿರುಗಿಸಲು ಕೋತಿಗಳ ಹರಸಾಹಸ - ನೀರಿಗಾಗಿ ಪರದಾಟ
ಉತ್ತರ ಕರ್ನಾಟಕ ಸೇರಿದಂತೆ ರಾಜ್ಯದ ಹಲವೆಡೆ ನೆರೆ ಉದ್ಬವಿಸಿ ಪ್ರಾಣಿ-ಪಕ್ಷಿಗಳು ಸೇರಿದಂತೆ ಮನುಷ್ಯರು ನಿರಾಶ್ರಿತರಾಗಿದ್ದಾರೆ. ಆದರೆ ಬಯಲು ಸೀಮೆ ಕೋಲಾರ ಜಿಲ್ಲೆಯಲ್ಲಿ ಮಾತ್ರ ಹನಿ ನೀರಿಗೂ ಹಾಹಾಕಾರ ಉಂಟಾಗಿ ಕುಡಿಯುವ ನೀರಿಗೂ ಬರ ಎದುರಾಗಿ ಪ್ರಾಣಿಗಳು ಪರದಾಡುವಂತಾಗಿದೆ.