ಪದೆ ಪದೇ ರೋಡಿಗಿಳಿಯುತ್ತಿದ್ದ ಯುವಕನಿಗೆ ನಡು ರಸ್ತೆಯಲ್ಲೇ ಹಿಗ್ಗಾಮುಗ್ಗಾ ಥಳಿತ - lady police beaten
ಬೆಳಗಾವಿ: ಪೊಲೀಸರ ಮಾತಿಗೆ ಕ್ಯಾರೇ ಎನ್ನದೇ ರೋಡಿಗಿಳಿಯುತ್ತಿದ್ದ ಯುವಕನಿಗೆ ನಂದಗಡ ಠಾಣೆ ಪಿಎಸ್ಐ ಲಾಠಿ ರುಚಿ ಬಿಸಿ ಮುಟ್ಟಿಸಿದ್ದಾರೆ. ಜಿಲ್ಲೆಯ ಖಾನಾಪುರ ತಾಲೂಕಿನ ನಂದಗಡ ಗ್ರಾಮದ ಯುವಕ ಪೊಲೀಸರಿಂದ ಏಟು ತಿಂದಿದ್ದಾನೆ. ಈ ಯುವಕ ಪೊಲೀಸರ ಮಾತು ಧಿಕ್ಕರಿಸಿ ರಸ್ತೆಗಿಳಿಯಲು ಮುಂದಾಗಿದ್ದಾನೆ. ಇದರಿಂದ ಕುಪಿತಗೊಂಡ ನಂದಗಡ ಠಾಣೆಯ ಪಿಎಸ್ಐ ಸುಮಾ ನಾಯ್ಕ್ ಯುವಕನಿಗೆ ಲಾಠಿಯಿಂದ ಹೊಡೆದಿದ್ದಾರೆ. ಆಗ ಎದುರು ಮಾತಾಡಿದ ಯುವಕನಿಗೆ ಪುರುಷ ಪೊಲೀಸ್ ಸಿಬ್ಬಂದಿ ನಡುರಸ್ತೆಯಲ್ಲೇ ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಬಳಿಕ ಯುವಕನನ್ನು ಪೊಲೀಸರು ಠಾಣೆಗೆ ಕರೆದೊಯ್ದಿದ್ದಾರೆ.