ಕೊಪ್ಪಳದಲ್ಲಿ ಲಾಕ್ಡೌನ್ ನಿಯಮ ಇನ್ನಷ್ಟು ಬಿಗಿ.. ಭಾಗ್ಯನಗರ ಮುಖ್ಯ ರಸ್ತೆ ಬಂದ್ - koppal latest news
ಕೊಪ್ಪಳ: ಕೊರೊನಾ ನಿಯಂತ್ರಣ ಮಾಡುವ ನಿಟ್ಟಿನಲ್ಲಿ ಅದೇಶ ನೀಡಿರುವ ಲಾಕ್ಡೌನ್ ನಿಯಮಗಳನ್ನು ಇನ್ನಷ್ಟು ಬಿಗಿಗೊಳಿಸಲಾಗಿದೆ. ಜಿಲ್ಲೆಯ ಕೆಲ ಗ್ರಾಮಸ್ಥರು ತಮ್ಮ ಗ್ರಾಮಗಳಿಗೆ ಯಾರೂ ಪ್ರವೇಶಿಸದಂತೆ ಸ್ವಯಂ ದಿಗ್ಬಂಧನ ಹಾಕಿಕೊಂಡಿದ್ದಾರೆ. ಇನ್ನು ಭಾಗ್ಯನಗರದಿಂದ ಕೊಪ್ಪಳಕ್ಕೆ ಜನರು ಅನಗತ್ಯವಾಗಿ ಓಡಾಡೋದನ್ನು ತಪ್ಪಿಸಲು ಭಾಗ್ಯನಗರದಲ್ಲಿ ಮುಖ್ಯ ರಸ್ತೆ ಬಂದ್ ಮಾಡಿ ದಿಗ್ಬಂಧನ ಹಾಕಿದ್ದಾರೆ. ಈ ಕುರಿತು ನಮ್ಮ ಕೊಪ್ಪಳ ಪ್ರತಿನಿಧಿ ನೀಡಿರುವ ಪ್ರತ್ಯಕ್ಷ ವರದಿ ಇಲ್ಲಿದೆ ನೋಡಿ.