ದಿನಸಿ ವ್ಯವಹಾರ ಹೊರತುಪಡಿಸಿ ಮಂಗಳೂರು ಸಂಪೂರ್ಣ ಸ್ತಬ್ಧ
ಕೊರೊನಾ ಹರಡುವುದನ್ನು ತಡೆಗಟ್ಟಲು ದೇಶದಾದ್ಯಂತ ಲಾಕ್ಡೌನ್ಗೆ ಮಂಗಳೂರಿನಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬೆಳಿಗ್ಗೆ 7 ರಿಂದ 12 ಗಂಟೆಯವರೆಗೆ ದಿನಸಿ ಖರೀದಿಸಲು ಅವಕಾಶವಿದ್ದು, ಈ ಕಾರಣದಿಂದ ಅಗತ್ಯ ಸಾಮಾಗ್ರಿಗಳ ಖರೀದಿಗಷ್ಟೇ ಜನರು ಅಂಗಡಿಗಳಿಗೆ ಬರುತ್ತಿದ್ದಾರೆ. ದಿನಸಿ ಅಂಗಡಿಗಳಿಗೆ ಬರುವ ಜನರು ಮತ್ತು ಕೆಲವೆ ಕೆಲವು ವಾಹನಗಳನ್ನು ಹೊರತುಪಡಿಸಿ ಕರಾವಳಿ ನಗರ ಸಂಪೂರ್ಣ ಸ್ತಬ್ಧವಾಗಿದೆ.