ಶಿವಮೊಗ್ಗ ನಗರ 5 ವಾರ್ಡ್ಗಳು ಸಂಪೂರ್ಣ ಲಾಕ್ಡೌನ್ - ಶಿವಮೊಗ್ಗ ಕೊರೊನಾ ಸುದ್ದಿ
ಶಿವಮೊಗ್ಗ: ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 869ಕ್ಕೆ ಏರಿಕೆಯಾಗಿದೆ. ಈ ನಡುವೆ ಸಂತೋಷದ ವಿಚಾರ ಅಂದ್ರೆ ಇದುವರೆಗೂ ಜಿಲ್ಲೆಯಲ್ಲಿ 489 ಜನ ಗುಣಮುಖರಾಗಿದ್ದಾರೆ. ಸದ್ಯ ಆಸ್ಪತ್ರೆಯಲ್ಲಿ 365 ಜನ ಚಿಕಿತ್ಸೆ ಪಡೆಯುತ್ತಿದ್ದು, ಜಿಲ್ಲೆಯಲ್ಲಿ ಒಟ್ಟು 15 ಸಾವು ಸಂಭವಿಸಿದೆ. ಶಿವಮೊಗ್ಗದ ಮೆಗ್ಗಾನ್ ಕೋವಿಡ್ ಆಸ್ಪತ್ರೆಯಲ್ಲಿ 172 ಜನ, ಗಾಜನೂರಿನ ಮೂರಾರ್ಜಿ ವಸತಿ ಶಾಲೆಯಲ್ಲಿ 166 ಜನ, ಖಾಸಗಿ ಆಸ್ಪತ್ರೆಯಲ್ಲಿ 17 ಜನ ಹಾಗೂ ಮನೆಯಲ್ಲಿಯೇ 10 ಜನ ಚಿಕಿತ್ಸೆ ಪಡೆಯುತ್ತಿದ್ದಾರೆ. ಜಿಲ್ಲೆಯಲ್ಲಿ ಒಟ್ಟು 246 ಕಂಟೇನ್ಮೆಂಟ್ ಝೋನ್ಗಳಿವೆ .ಇದುವರೆಗೂ 23,699 ಜನರ ಗಂಟಲು ದ್ರವದ ಮಾದರಿ ಪರೀಕ್ಷೆಗೆ ಕಳುಹಿಸಲಾಗಿದೆ. ಕೊರೊನಾ ಹೆಚ್ಚಾಗುತ್ತಿರುವ ನಗರದ 5 ವಾರ್ಡ್ಗಳನ್ನು ಸಂಪೂರ್ಣ ಲಾಕ್ಡೌನ್ ಮಾಡಿ ಪಾಲಿಕೆ ಆಯುಕ್ತ ಚಿದಾನಂದ ವಾಠರೆ ಆದೇಶ ಮಾಡಿದ್ದಾರೆ.