ಚಾಮರಾಜನಗರದಲ್ಲಿ ಇಂದಿನಿಂದ ಲಾಕ್ಡೌನ್ ಜಾರಿ.. ಜನರಿಂದ ಒಳ್ಳೇ ರೆಸ್ಪಾನ್ಸ್.. - ಚಾಮರಾಜನಗರ
ಕೊರೊನಾ ಮುನ್ನೆಚ್ಚರಿಕೆ ಹಿನ್ನೆಲೆ ಜಿಲ್ಲೆಯಾದ್ಯಂತ ಸಂಜೆ 4 ರಿಂದ ಬೆಳಗ್ಗೆ 6ರವರೆಗೆ ಲಾಕ್ಡೌನ್ ಜಾರಿಯಾಗಿದೆ. ಇದಕ್ಕೆ ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು. ಔಷಧ ಅಂಗಡಿಗಳು, ಹಾಲಿನ ಮಳಿಗೆಗಳನ್ನು ಬಿಟ್ಟರೆ ಉಳಿದ ಎಲ್ಲಾ ವ್ಯಾಪಾರ-ವಹಿವಾಟು ಬಂದ್ ಆಗಿತ್ತು. ಉಳಿದಂತೆ ಬೀದಿಬದಿ ವ್ಯಾಪಾರ, ಹೋಟೆಲ್ಗಳು, ಟೀ ಅಂಗಡಿಗಳನ್ನು ಪೊಲೀಸರು ಬಂದು ಎಚ್ಚರಿಸುವ ಮುಂಚೆಯೇ ಬಂದ್ ಮಾಡಿ ಜಾಗೃತಿ ಮೆರೆದರು..