ಬೆಂಗಳೂರು ಲಾಕ್ಡೌನ್: ಒಂದು ವಾರ ದೇವಾಲಯಗಳು ಬಂದ್ - ಲಾಕ್ಡೌನ್ ಬೆಂಗಳೂರು '
ಬೆಂಗಳೂರು: ಕೊರೊನಾ ಮಹಾಮಾರಿಯಿಂದಾಗಿ ದೇವಸ್ಥಾನಕ್ಕೆ ಬರುವ ಭಕ್ತರ ಸಂಖ್ಯೆಯಲ್ಲಿ ಗಣನೀಯವಾಗಿ ಇಳಿಕೆಯಾಗಿತ್ತು. ಇದೀಗ ಮತ್ತೆ ನಗರದಲ್ಲಿ ಕೊರೊನಾ ಹರಡುವಿಕೆ ಹೆಚ್ಚಾದ ಕಾರಣ ಒಂದು ವಾರದ ಲಾಕ್ಡೌನ್ ಜಾರಿಯಾಗಿದ್ದು, ದೇವಸ್ಥಾನಗಳು, ಚರ್ಚ್, ಮಸೀದಿ ಹಾಗೂ ಎಲ್ಲಾ ಪ್ರಾರ್ಥನಾ ಮಂದಿರಗಳನ್ನು ಸಂಪೂರ್ಣವಾಗಿ ಬಂದ್ ಮಾಡಲು ಸರ್ಕಾರ ಆದೇಶಿಸಿದೆ.