ರಾಜ್ಯಾದ್ಯಂತ ಲಾಕ್ಡೌನ್: ಇದು ಬೆಂಗಳೂರು ನಗರದ ಸ್ಥಿತಿ.. - ಭಾರತ ಲಾಕ್ಡೌನ್ ಸುದ್ದಿ
ಭಾರತ ಲಾಕ್ಡೌನ್ 3ನೇ ದಿನಕ್ಕೆ ಕಾಲಿಟ್ಟಿದೆ. ಬೆಂಗಳೂರಿನ ಕೇಂದ್ರತಾಣ ಮೆಜೆಸ್ಟಿಕ್ ಸುತ್ತಮುತ್ತ ವಾಹನಗಳು, ಜನರಿಲ್ಲದೆ ರಸ್ತೆಗಳು ಬಿಕೋ ಎನ್ನುತ್ತಿವೆ. ಎಲ್ಲೆಡೆ ಖಾಕಿ ಕಟ್ಟೆಚ್ಚರ ಕಾಣುತ್ತಿದೆ. ನಗರದ ಪ್ರಮುಖ ಪ್ರದೇಶಗಳಾದ ಎಂ.ಜಿ. ರೋಡ್, ಮಲ್ಲೇಶ್ವರಂ, ಯಶವಂತಪುರ, ಶಿವಾಜಿನಗರ, ಶಾಂತಿನಗರ ಹಾಗು ಕೋರಮಂಗಲ ಹೀಗೆ ನಾನಾ ರಸ್ತೆಗಳು ಖಾಲಿ ಖಾಲಿಯಾಗಿವೆ.