ಗಿಡದಲ್ಲೇ ಹಣ್ಣಾಗಿ ಹಾಳಾಗುತ್ತಿವೆ ಅಂಜೂರ - Bellary latest video
ಬಳ್ಳಾರಿ ಜಿಲ್ಲೆಯ ಕುರುಗೋಡು ತಾಲೂಕಿನ ಮುಷ್ಟಗಟ್ಟೆ ಗ್ರಾಮದಲ್ಲಿ ನಾಗರಾಜ್ ಎಂಬ ರೈತ ತನ್ನ 20 ಎಕರೆ ಜಮೀನಿನಲ್ಲಿ ಅಂಜೂರ ಹಣ್ಣು ಬೆಳೆದಿದ್ದಾರೆ. ಆದ್ರೆ ಭಾರತ ಲಾಕ್ ಡೌನ್ ಆಗಿ 15 ದಿನಗಳು ಕಳೆದಿವೆ. ಇದರಿಂದಾಗಿ ಹಣ್ಣನ್ನು ಮಾರುಕಟ್ಟೆಗೆ ಸಾಗಿಸಲಾಗದೆ ಅವು ಗಿಡದಲ್ಲಿಯೇ ಹಾಳಾಗುತ್ತಿದೆ. ಸದ್ಯದ ಪರಿಸ್ಥಿತಿಯಲ್ಲಿ ಮಾರಾಟ ಮಾಡೋಕಂತೂ ಆಗುತ್ತಿಲ್ಲ. ಪರಿಹಾರವಾದರೂ ಕೊಡಿ ಎಂದು ಅವರು ಸರ್ಕಾರಕ್ಕೆ ಈಟಿವಿ ಭಾರತ ಮೂಲಕ ಮನವಿ ಸಲ್ಲಿಸಿದ್ದಾರೆ.
Last Updated : Apr 8, 2020, 6:12 PM IST