ಬೀದರ್: ಬಾವಗಿ ಗ್ರಾಮಸ್ಥರಿಂದ ಸ್ವಯಂ ಲಾಕ್‌ಡೌನ್ ನಿರ್ಣಯ - ಬಾವಗಿ ಗ್ರಾಮಸ್ಥರಿಂದ ಸ್ವಯಂ ಲಾಕ್ ಡೌನ್
ಕೊರೊನಾ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಬೀದರ್ ತಾಲೂಕಿನ ಬಾವಗಿ ಗ್ರಾಮಸ್ಥರು ಸ್ವಯಂಪ್ರೇರಿತರಾಗಿ ಲಾಕ್ ಡೌನ್ ಜಾರಿಗೊಳಿಸಿದ್ದಾರೆ. ಬೆಳಗ್ಗೆ ಹಾಗೂ ಸಂಜೆ 6 ಗಂಟೆಯಿಂದ 8 ಗಂಟೆವರೆಗೆ ಸಾರ್ವಜನಿಕರು ಅಗತ್ಯ ವಸ್ತುಗಳ ಖರೀದಿ ಮಾಡಬಹುದು. ಇದನ್ನು ಬಿಟ್ಟು ಅನಗತ್ಯವಾಗಿ ಗುಂಪು ಕಟ್ಟಿಕೊಂಡು ರಸ್ತೆಗೆ ಬರುವುದನ್ನು ಸಂಪೂರ್ಣವಾಗಿ ನಿರ್ಬಂಧಿಸಲಾಗಿದೆ. ಸುಮಾರು 2,400 ಜನ ವಸತಿ ಪ್ರದೇಶ ಇರುವ ಗ್ರಾಮದಲ್ಲಿ ಕೊರೊನಾ ಸೋಂಕು ಹರಡಬಾರದು ಎಂದು ಸ್ಥಳೀಯರೇ ನಿರ್ಣಯ ಕೈಗೊಂಡು ಡಂಗೂರ ಸಾರಿ ಹೇಳಿದ್ದಾರೆ.