ಹನುಮನ ಬೆಟ್ಟದಲ್ಲಿ ಜಾಂಬವಂತ ಪ್ರತ್ಯಕ್ಷ.. ಸ್ಥಳೀಯರಲ್ಲಿ ಆತಂಕ - ಜಾಂಬವಂತ
ಕೊಪ್ಪಳ ಜಿಲ್ಲೆ ಗಂಗಾವತಿ ನಗರದ ಬಳಿಯ ಆಂಜನೇಯ ದೇವಸ್ಥಾನದ ಸಮೀಪದ ಬೆಟ್ಟದಲ್ಲಿ ಬುಧವಾರ ಸಂಜೆ ಕರಡಿಯೊಂದು ಪ್ರತ್ಯಕ್ಷವಾಗಿದೆ. ಗಂಗಾವತಿಯಿಂದ ಆನೆಗೊಂದಿ ಕಡೆಗೆ ಹೊರಟಿದ್ದ ಸವಾರರು ಇದನ್ನು ಕಂಡು ಆತಂಕಕ್ಕೊಳಗಾಗಿದ್ದಾರೆ. ಕಳೆದ ಒಂದುವರೆ ವರ್ಷದಲ್ಲಿ ಇದೇ ಮೊದಲ ಬಾರಿಗೆ ಕರಡಿ ಪ್ರತ್ಯಕ್ಷವಾಗಿದೆ. ಆಂಜನೇಯ ದೇವಸ್ಥಾನಕ್ಕೆ ಹೊಂದಿಕೊಂಡಂತಿರುವ ಬೆಟ್ಟದ ಇಳಿಜಾರು ಪ್ರದೇಶದ ಒಂದು ದೊಡ್ಡ ಬಂಡೆಯ ಮೇಲೆ ಕರಡಿ ವಿಶ್ರಾಂತಿಗೆ ಜಾರಿದ್ದು, ಜನರ ಗದ್ದಲ ಗಮನಿಸಿ ನಿಧಾನವಾಗಿ ಇಳಿದು ಬಂಡೆಗಳ ನಡುವೆ ಕಣ್ಮರೆಯಾಗಿದೆ.