ಅರಣ್ಯೀಕರಣ ಹೆಸರಲ್ಲಿ ಅಕೇಶಿಯ ನೆಡುತ್ತಿರುವ ಅರಣ್ಯ ಇಲಾಖೆ ವಿರುದ್ಧ ಆಕ್ರೋಶ
ಕಾರವಾರ(ಉತ್ತರಕನ್ನಡ): ಅರಣ್ಯ ಇಲಾಖೆ ವತಿಯಿಂದ ಪ್ರತಿ ವರ್ಷವೂ ಅರಣ್ಯೀಕರಣದ ಹೆಸರಲ್ಲಿ ಸಾಕಷ್ಟು ಗಿಡಗಳನ್ನ ನೆಡಲಾಗುತ್ತದೆ. ಅದರಲ್ಲೂ ವಿವಿಧ ಬಗೆಯ ಹಣ್ಣಿನ ಗಿಡಗಳು ಸೇರಿ ಉಪಯುಕ್ತ ಗಿಡಗಳನ್ನು ಬೆಳೆಸುವುದಕ್ಕೆ ಜನ ಕೂಡ ಅರಣ್ಯ ಇಲಾಖೆಗೆ ಸಾಥ್ ನೀಡುತ್ತಿದ್ದಾರೆ. ಆದರೆ, ಇಲ್ಲೊಂದು ಗ್ರಾಮದಲ್ಲಿ ಮಾತ್ರ ಜನಸಾಮಾನ್ಯರಿಗೆ ಮತ್ತು ವನ್ಯಜೀವಿಗಳಿಗೆ ಮಾರಕವಾಗುವ ಅಕೇಶಿಯ ಗಿಡಗಳನ್ನು ನೆಡುತ್ತಿದ್ದು, ಅರಣ್ಯ ಇಲಾಖೆ ಕ್ರಮಕ್ಕೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.