ಸಕ್ಕರೆನಾಡು ಲಿಥಿಯಂ ನಾಡಾಗುವ ಕಾಲ ಸನ್ನಿಹಿತ: ಪರಿಸರ ಪ್ರೇಮಿಗಳು ಏನಂತಾರೆ? - Lithium deposition found in Mandya
ಮಂಡ್ಯ ಸಕ್ಕರೆಗೆ ಮಾತ್ರ ಪ್ರಸಿದ್ಧಿಯಾಗಿಲ್ಲ. ಅಮೂಲ್ಯ ನಿಕ್ಷೇಪಕ್ಕೂ ಪೇಟೆಂಟ್ ಪಡೆಯುವ ಕಾಲ ಸನ್ನಿಹಿತವಾಗುತ್ತಿದೆ. ಕೇಂದ್ರ ಗಣಿ ಮತ್ತು ಪರಿಸರ ಇಲಾಖೆ ಬಿಡುಗಡೆ ಮಾಡಿರುವ ವರದಿಯಿಂದಾಗಿ ಮಂಡ್ಯದತ್ತ ಬ್ಯಾಟರಿ ಉದ್ಯಮ ಕಣ್ಣುಬಿಟ್ಟು ನೋಡುವಂತಾಗಿದೆ. ಕೆಲವೇ ದೇಶಗಳಲ್ಲಿ ಸಿಗುತ್ತಿರುವ ಲಿಥಿಯಂ ನಿಕ್ಷೇಪ ಮಂಡ್ಯದಲ್ಲೂ ಇದೆ ಎಂಬ ವರದಿ ಜಿಲ್ಲೆಯ ಜನರಿಗೆ ಸಂತಸ ತಂದಿದೆ.