ಕೈದಿಗಳಿಗೆ ಅಕ್ಷರ ದೀಕ್ಷೆ... ಸಹ ಕೈದಿಗಳಿಗೆ ವಿಚಾರಣಾಧೀನ ಕೈದಿಗಳಿಂದ ಅಕ್ಷರಾಭ್ಯಾಸ - ಜೈಲಿನಲ್ಲಿ ಅಕ್ಷರಾಭ್ಯಾಸ
ತಪ್ಪೇ ಮಾಡದವರು ಎಲ್ಲಿದ್ದಾರೆ ಹೇಳಿ..? ಯಾವುದೋ ಕ್ಷಣದಲ್ಲಿ ಕಾನೂನಿನ ವಿರುದ್ಧವಾಗಿ ನಡೆಯುವವರು ಜೈಲು ಶಿಕ್ಷೆಗೆ ಗುರಿಯಾಗುತ್ತಾರೆ. ಜೈಲಿನಲ್ಲಿದ್ದಷ್ಟು ಕಾಲ ಅಪರಾಧಿಗಳ ಮನಪರಿವರ್ತನೆಯಾಗಿ ಹೊರ ಬಂದ ನಂತರ ಉತ್ತಮ ಪ್ರಜೆಗಳಾಗಲಿ ಎಂಬುವುದೇ ನಮ್ಮ ಕಾನೂನಿನ ಉದ್ದೇಶ. ಇದನ್ನು ಕೊಪ್ಪಳದ ಜೈಲಿನಲ್ಲಿ ಅಕ್ಷರಾಭ್ಯಾಸ ಮೂಲಕ ಸಾಕಾರಗೊಳಿಸಲಾಗುತ್ತಿದೆ.