ವೀಕೆಂಡ್ ಮಸ್ತಿ ನಿರೀಕ್ಷೆಯಲ್ಲಿದ್ದ ಮದ್ಯಪ್ರಿಯರಲ್ಲಿ ಇವತ್ತು 'ಸ್ಪಿರಿಟ್' ಇಲ್ಲ! - ಬೆಂಗಳೂರು ಮದ್ಯದಂಗಡಿ ಬಂದ್ ಸುದ್ದಿ
ಭಾನುವಾರದ ಲಾಕ್‌ಡೌನ್‌ಗೆ ಮದ್ಯದಂಗಡಿಯ ಮಾಲೀಕರು ಬೆಂಬಲ ನೀಡಿದ್ದಾರೆ. ನಗರದ ಎಲ್ಲಾ ಮದ್ಯದಂಗಡಿ ಬಂದ್ ಆಗಿದ್ದು ಗ್ರಾಹಕರ ಗಮನಕ್ಕೆಂದು ಅಂಗಡಿಗಳ ಎದುರುಗಡೆ 'ಇಂದು ಮದ್ಯ ಮಾರಾಟ ಇರುವುದಿಲ್ಲ' ಎಂಬ ಬೋರ್ಡ್ ಹಾಕಲಾಗಿದೆ. ಅಕ್ರಮ ಮದ್ಯ ಮಾರಾಟ ಕಂಡುಬಂದರೆ ಅಬಕಾರಿ ಇಲಾಖೆ ಕಠಿಣ ಕ್ರಮದ ಎಚ್ಚರಿಕೆ ನೀಡಿದೆ.