ಕೊನೆಗೂ ಒಯಸಿಸ್ನಲ್ಲಿ ನೀರು ಸಿಕ್ಕಿದ ಅನುಭವ ... ಮದಿರೆ ಲವರ್ಸ್ಗಳಿಗೆ ಹಬ್ಬವೋ ಹಬ್ಬ! - ಮದ್ಯ ಮಾರಾಟ ಆರಂಭ
🎬 Watch Now: Feature Video
ಲಾಕ್ಡೌನ್ ಹಿನ್ನೆಲೆ ಕಳೆದ 40 ಕ್ಕೂ ಅಧಿಕ ದಿನಗಳಿಂದ ಮದ್ಯ ಸಿಗದೆ ಮದ್ಯವ್ಯಸನಿಗಳು ಕಂಗಾಲಾಗಿದ್ದರು. ಇಂದು ರಾಜ್ಯ ಸರ್ಕಾರ ಮದ್ಯ ಮಾರಾಟಕ್ಕೆ ಷರತ್ತು ಬದ್ದ ಒಪ್ಪಿಗೆ ನೀಡಿದ ಹಿನ್ನೆಲೆ ಮದ್ಯ ಪ್ರಿಯರಿಗೆ ಸಿಹಿ ಸುದ್ದಿ ನೀಡಿದೆ. ಯಾದಗಿರಿ ನಗರದಲ್ಲಿ ಬೆಳಿಗ್ಗೆಯಿಂದಲೇ ಮದ್ಯವ್ಯಸನಿಗಳು ಮದ್ಯ ಮಾರಾಟ ಮಳಿಗೆಗಳ ಮುಂದೆ ಸರದಿ ಸಾಲಿನಲ್ಲಿ ಉರಿ ಬಿಸಿಲನ್ನೂ ಲೆಕ್ಕಿಸದೇ ಎಣ್ಣೆಗಾಗಿ ಬಕಪಕ್ಷಿಯಂತೆ ಕಾದು ನಿಂತಿದ್ದರು. ಸರದಿಯಲ್ಲಿ ನಿಂತ ಕುಡುಕರ ಕೈಗೆ ಮದ್ಯ ಸಿಕ್ಕ ನಂತರ ಅವರ ಖುಷಿ ಗಗನಕ್ಕೆ ಮುಟ್ಟಿದಂತೆ ಭಾಸವಾಗಿದ್ದು, ಕುಡುಕರಿಗೆ ಒಂದು ರೀತಿ ಹಬ್ಬದ ವಾತಾವರಣ ನಿರ್ಮಾಣವಾದಂತಾಗಿತ್ತು..ಈ ಕುರಿತು ನಮ್ಮ ಪ್ರತಿನಿಧಿ ನೀಡಿರುವ ಪ್ರತ್ಯಕ್ಷ ವರದಿ ಇಲ್ಲಿದೆ ನೋಡಿ.