ಕರ್ನಾಟಕ

karnataka

ETV Bharat / videos

ತುಮಕೂರು: ಲಿಕ್ವಿಡ್ ಆಕ್ಸಿಜನ್ ಪೂರೈಕೆಯಿಂದ 2800 ಕೊರೊನಾ ಸೋಂಕಿತರು ಗುಣಮುಖ - 2800 corona patients recovered from oxygen

By

Published : Dec 1, 2020, 2:31 PM IST

ತುಮಕೂರು ಜಿಲ್ಲಾಸ್ಪತ್ರೆಯಲ್ಲಿ ಈವರೆಗೂ 2800 ಮಂದಿ ಕೊರೊನಾ ಸೋಂಕಿತರಿಗೆ ಆಕ್ಸಿಜನ್ ನೀಡುವ ಮೂಲಕ ರೋಗ ಗುಣಪಡಿಸಲಾಗಿದೆ ಎಂದು ಜಿಲ್ಲಾ ಶಸ್ತ್ರಚಿಕಿತ್ಸಕ ಡಾ. ವೀರಭದ್ರಯ್ಯ ತಿಳಿಸಿದ್ದಾರೆ. 'ಈಟಿವಿ ಭಾರತ'ದೊಂದಿಗೆ ಮಾತನಾಡಿದ ಅವರು, ಜಿಲ್ಲಾ ಸರ್ಕಾರಿ ಆಸ್ಪತ್ರೆ ಆವರಣದಲ್ಲಿ 'ಲಿಕ್ವಿಡ್ ಆಕ್ಸಿಜನ್ ವಿಶೇಷ ಘಟಕ'ವನ್ನು ತೆರೆಯಲಾಗಿತ್ತು. ದಿನದಿಂದ ದಿನಕ್ಕೆ ಕೋವಿಡ್ ಸೋಂಕಿತರು ಆಸ್ಪತ್ರೆಗೆ ದಾಖಲಾಗುವ ಸಂಖ್ಯೆ ಹೆಚ್ಚಿತ್ತು. ಅದರಲ್ಲೂ ಆಕ್ಸಿಜನ್ ಅಗತ್ಯವುಳ್ಳ ರೋಗಿಗಳು ಬರುತ್ತಿದ್ದ ಹಿನ್ನೆಲೆಯಲ್ಲಿ ಅದಕ್ಕೆ ಪೂರಕವಾಗಿ ಆಕ್ಸಿಜನ್ ನೀಡಲು ಇದು ಸಹಕಾರಿಯಾಯಿತು ಎಂದು ತಿಳಿಸಿದ್ದಾರೆ.

ABOUT THE AUTHOR

...view details