ಲಿಂಗನಮಕ್ಕಿ ಜಲಾಶಯದಿಂದ 4,800 ಕ್ಯೂಸೆಕ್ ನೀರು ಹೊರಕ್ಕೆ: ಮೈದುಂಬಿ ಹರಿಯುತ್ತಿದೆ ಜೋಗ ಫಾಲ್ಸ್ - ಮೂರು ಕ್ರಸ್ಟ್ ಗೇಟ್
ಶಿವಮೊಗ್ಗ ಜಿಲ್ಲೆಯ ಲಿಂಗನಮಕ್ಕಿ ಜಲಾಶಯದಿಂದ ಇಂದು 4,800 ಕ್ಯೊಸೆಕ್ ನೀರನ್ನು ನದಿಗೆ ಬಿಡಲಾಗಿದೆ. ಶರಾವತಿ ನದಿಗೆ ಸಾಗರ ತಾಲೂಕು ಲಿಂಗನಮಕ್ಕಿ ಬಳಿ ಅಣೆಕಟ್ಟೆ ನಿರ್ಮಿಸಲಾಗಿದ್ದು, ಜಲಾಶಯಕ್ಕೆ 25 ಸಾವಿರ ಕ್ಯೂಸೆಕ್ ನೀರು ಒಳ ಹರಿವು ಇರುವುದರಿಂದ ನದಿಗೆ ಮೂರು ಕ್ರಸ್ಟ್ ಗೇಟ್ ಮೂಲಕ ಬಿಡುಗಡೆ ಮಾಡಲಾಗಿದೆ. ಜಲಾಶಯದ ಗರಿಷ್ಠ ಮಟ್ಟ 1,819 ಅಡಿ ಆಗಿದ್ದು, ಇಂದು 1,818.40 ಅಡಿಗೆ ತಲುಪಿತ್ತು. ಅಲ್ಲದೇ, ನದಿಗೆ ನೀರು ಬಿಟ್ಟಿರುವ ಕಾರಣ ಜೋಗ ಮೈದುಂಬಿ ಹರಿಯುತ್ತಿದೆ.