ಮೈಸೂರು ವಿವಿಯಲ್ಲಿ ಎಸ್.ಪಿ.ಬಿ. ಪೀಠ ಸ್ಥಾಪಿಸಲು ಸರ್ಕಾರಕ್ಕೆ ಪತ್ರ: ಕುಲಪತಿ ಪ್ರೊ.ಹೇಮಂತ್ ಕುಮಾರ್ - Chancellor Prof. Hemant Kumar
ಮೈಸೂರು: ಮೈಸೂರು ವಿವಿಯಲ್ಲಿ ಎಸ್.ಪಿ. ಬಾಲಸುಬ್ರಹ್ಮಣ್ಯಂ ಅವರ ಅಧ್ಯಯನ ಪೀಠವನ್ನು ಶಾಶ್ವತವಾಗಿ ಆರಂಭಿಸಲು ಸರ್ಕಾರಕ್ಕೆ ಪತ್ರ ಬರೆಯಲಾಗಿದೆ ಎಂದು ವಿವಿ ಕುಲಪತಿ ಪ್ರೊ. ಹೇಮಂತ್ ಕುಮಾರ್ ಅವರು 'ಈಟಿವಿ ಭಾರತ'ಕ್ಕೆ ತಿಳಿಸಿದ್ದಾರೆ. ಸಂಗೀತ ಕ್ಷೇತ್ರದಲ್ಲಿ ಅದ್ವೀತಿಯ ಸಾಧನೆ ಮಾಡಿರುವ ಎಸ್.ಪಿ. ಬಾಲಸುಬ್ರಹ್ಮಣ್ಯಂ ಅವರ ಜೀವನ, ಸಂಗೀತದ ಬಗ್ಗೆ ಅಧ್ಯಯನ ನಡೆಸಲು ಮೈಸೂರು ವಿವಿಯಲ್ಲಿ ತಾತ್ಕಾಲಿಕ ಪೀಠ ಸ್ಥಾಪಿಸಲು ಕಳೆದ ನವೆಂಬರ್ನಲ್ಲಿ ಸಿಂಡೀಕೆಟ್ನಲ್ಲಿ ಅನುಮೋದನೆ ನೀಡಲಾಗಿದೆ. ಇದಕ್ಕಾಗಿ 5 ಲಕ್ಷ ರೂ.ಹಣವನ್ನು ತೆಗೆದಿರಿಸಲಾಗಿದ್ದು, ಎಸ್.ಪಿ.ಬಾಸುಬ್ರಹ್ಮಣ್ಯಂ ಕುರಿತು ಅಧ್ಯಯನ ನಡೆಸಲು ಫೈನ್ ಆರ್ಟ್ ಕಾಲೇಜಿನಲ್ಲಿ ಓರ್ವ ಪ್ರೊಫೆಸರ್ ನೇಮಕ ಮಾಡಲಾಗಿದ್ದು, ಇದು ಏಪ್ರಿಲ್ನಿಂದ ಕಾರ್ಯ ಆರಂಭಿಸಲಿದೆ ಎಂದು ಮಾಹಿತಿ ನೀಡಿದರು.