ಕರ್ನಾಟಕ

karnataka

ETV Bharat / videos

ಬಜೆಟ್ ಅಧಿವೇಶನದಲ್ಲಿ ಉತ್ತಮ ಅಂಶಗಳ ಬಗ್ಗೆ ಚರ್ಚೆಯಾಗಲಿ: ಡಿ.ಎಚ್. ಶಂಕರಮೂರ್ತಿ - Lets discuss the best things at the budget session

By

Published : Mar 4, 2021, 7:17 PM IST

ಶಿವಮೊಗ್ಗ: ಬಜೆಟ್ ಅಧಿವೇಶನ ಪ್ರಾರಂಭವಾಗಿದ್ದು, ಈ ವೇಳೆ ಉತ್ತಮ ಅಂಶಗಳ ಬಗ್ಗೆ ಚರ್ಚೆಯಾಗಲಿ ಎಂದು ವಿಧಾನ ಪರಿಷತ್ ಮಾಜಿ ಸಭಾಪತಿ ಡಿ.ಎಚ್. ಶಂಕರಮೂರ್ತಿ ಹೇಳಿದ್ದಾರೆ. ಅಧಿವೇಶನದಲ್ಲಿ ನಾಡಿನ ಸಮಸ್ಯೆಗಳ ಬಗ್ಗೆ ಹಾಗೂ ಬಜೆಟ್ ಕುರಿತು ಉತ್ತಮ ಚರ್ಚೆಯಾಗಲಿ. ಕೋವಿಡ್ ಸಂಕಷ್ಟದ ನಡುವೆಯೂ ಒಳ್ಳೆಯ ಬಜೆಟ್ ನೀಡುತ್ತೇನೆ ಎಂದು ಮುಖ್ಯಮಂತ್ರಿಗಳು ತಿಳಿಸಿದ್ದಾರೆ, ಅದು ಆಗಲಿ ಎಂದು ಆಶಿಸುತ್ತೇನೆ ಎಂದರು. ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ಅವರು, ನಡೆಯಬಾರದ ಘಟನೆ ನಡೆದಿದೆ. ಅದಕ್ಕೆ ಮುಖ್ಯಮಂತ್ರಿಗಳು ತಕ್ಷಣ ಸ್ಪಂದಿಸಿ ರಾಜೀನಾಮೆ ಪಡೆದಿದ್ದಾರೆ. ಇ‌ಂತಹ ದುರ್ಘಟನೆಗಳು ಸಮಾಜದಲ್ಲಿ ನಡೆಯಬಾರದು ಎಂದು ಹೇಳಿದರು.

ABOUT THE AUTHOR

...view details