ಎಲ್ಲ ಕ್ಷೇತ್ರಗಳಲ್ಲಿಯೂ ಮಹಿಳೆಯರು ತೊಡಗಿಸಿಕೊಳ್ಳಲಿ:ಡಿಸಿಪಿ ಇಶಾ ಪಂತ್ - ಈಟಿವಿ ಭಾರತ್ ಜೊತೆ ಡಿಸಿಪಿ ಇಶಾ ಪಂತ್
ಮಹಿಳೆಯರು ಎಲ್ಲ ಕ್ಷೇತ್ರಗಳಲ್ಲಿಯೂ ತೊಡಗಿಸಿಕೊಂಡಿರುವುದು ಬಹಳ ಸಂತಸದ ಸಂಗತಿ. ಮಹಿಳೆಯರ ಏಳಿಗೆಗಾಗಿ ಹಾಗೂ ಮಹಿಳಾ ಸಿಬ್ಬಂದಿ ಸಮಸ್ಯೆ ನಿವಾರಣೆಗಾಗಿ ನಮ್ಮ ಇಲಾಖೆಯಿಂದ ಹಲವಾರು ಕ್ರಮಗಳನ್ನು ಕೈಗೊಳ್ಳಲಾಗಿದೆ. ಬೆಂಗಳೂರು ಸಿಟಿ ಮಹಿಳೆಯರಿಗೆ ತುಂಬಾ ಸೇಫ್ ಆಗಿರುವ ಸಿಟಿ ಎಂದು ಡಿಸಿಪಿ ಇಶಾ ಪಂತ್ ಅಭಿಪ್ರಾಯಪಟ್ಟಿದ್ದಾರೆ. ಮಹಿಳೆಯರು ಎಲ್ಲ ಕ್ಷೇತ್ರಗಳಲ್ಲಿಯೂ ಮೇಲುಗೈ ಸಾಧಿಸಬೇಕು ಎಂಬ ಉದ್ದೇಶದಿಂದ ಬೀ-ಟುಗೆದರ್ ಕ್ಯಾಂಪೆನ್, ವೀರ ವನಿತೆಯರು, ಶೌರ್ಯವಾಹಿನಿ ಹೀಗೆ ನಾನಾ ಬಗೆಯ ಕಾರ್ಯಕ್ರಮಗಳನ್ನು ಪರಿಚಯಿಸಿದ ಆಗ್ನೆಯ ವಿಭಾಗ ಡಿಸಿಪಿ ಇಶಾ ಪಂತ್ ಈಟಿವಿ ಭಾರತದೊಂದಿಗೆ ತಮ್ಮೊಳಗಿನ ಅನಿಸಿಕೆ ಹಂಚಿಕೊಂಡಿರುವ ಬಗೆ ಹೀಗೆ..