ಕೊನೆಗೂ ಚಿರತೆ ಸೆರೆ... ನಿಟ್ಟುಸಿರು ಬಿಟ್ಟ ಗ್ರಾಮಸ್ಥರು - ಬೋನಿಗೆ ಬಿದ್ದ ಚಿರತೆ
ನೆಲಮಂಗಲ: ಜಾನುವಾರುಗಳ ಮೇಲೆ ದಾಳಿ ಮಾಡಿ ಗ್ರಾಮಸ್ಥರಿಗೆ ಭಯವನ್ನುಂಟು ಮಾಡಿದ್ದ ಚಿರತೆಯನ್ನು ನೆಲಮಂಗಲ ವಲಯ ಅರಣ್ಯಧಿಕಾರಿಗಳು ಸೆರೆ ಹಿಡಿದಿದ್ದಾರೆ. ತಾಲೂಕಿನ ಅರಸರಹಳ್ಳಿ ಸೇರಿದಂತೆ ಸುತ್ತಲಿನ ಗ್ರಾಮಗಳಲ್ಲಿ ಚಿರತೆ ಹಲವು ಪ್ರಾಣಿಗಳನ್ನ ಬಲಿ ಪಡೆದಿತ್ತು. ಇದರಿಂದ ಗ್ರಾಮಸ್ಥರು ಹೊಲ ಗದ್ದೆಗಳಿಗೆ ಹೋಗಲು ಭಯಪಡುತ್ತಿದ್ದರು. ಅಂತೆಯೇ ಕಳೆದ ವಾರ ಅರಸರಹಳ್ಳಿಯ ನೀಲಿಗಿರಿ ತೋಪಿನಲ್ಲಿ ಚಿರತೆ ಸೆರೆಗೆ ಬೋನು ಇಡಲಾಗಿತ್ತು. ಇದೀಗ ಚಿರತೆ ಬೋನಿಗೆ ಬಿದ್ದಿದೆ. ಸೆರೆ ಸಿಕ್ಕ ಚಿರತೆ ಮೂರು ವರ್ಷದ ಹೆಣ್ಣು ಚಿರತೆಯಾಗಿದ್ದು, ರಾಮನಗರ ಜಿಲ್ಲೆಯ ಕನಕಪುರ ಅರಣ್ಯಕ್ಕೆ ಬೀಡಲಾಗಿದೆ.