ಗ್ರಾಮಸ್ಥರ ನಿದ್ದೆಗೆಡಿಸಿದ್ದ ಚಿರತೆ: ತಂತಿ ಬೇಲಿಗೆ ಸಿಲುಕಿ ನರಳಾಟ: ವಿಡಿಯೋ - ಉಡುಪಿಯಲ್ಲಿ ಚಿರತೆ ಸೆರೆ
ಉಡುಪಿ: ಹಲವು ತಿಂಗಳಿಂದ ಪಳ್ಳಿ ಗ್ರಾಮಸ್ಥರ ನಿದ್ದೆಗೆಡಿಸಿದ್ದ ಚಿರತೆಯೊಂದು ತಡೆಗೋಡೆಯ ತಂತಿ ಬೇಲಿಗೆ ಸಿಕ್ಕಿ ಹಾಕಿಕೊಂಡು ಗಾಯಗೊಂಡಿದೆ. ಅರಣ್ಯ ಇಲಾಖೆ ಸಿಬ್ಬಂದಿ ಮಧ್ಯಾಹ್ನ ಒಂದು ಗಂಟೆವರೆಗೆ ಕಾರ್ಯಾಚರಣೆ ನಡೆಸಿ ಚಿರತೆ ರಕ್ಷಣೆ ಮಾಡಿದ್ದಾರೆ. ನಾಲ್ಕು ವರುಷದ ಗಂಡು ಚಿರತೆ ಇದಾಗಿದೆ. ಕಾರ್ಕಳದ ನಿಟ್ಟೆಯಲ್ಲಿ ಚಿರತೆಗೆ ಚಿಕಿತ್ಸೆ ನೀಡಲಾಗಿದೆ.