ಕರ್ನಾಟಕ

karnataka

ETV Bharat / videos

ಗ್ರಾಮಸ್ಥರ ನಿದ್ದೆಗೆಡಿಸಿದ್ದ ಚಿರತೆ ಕೊನೆಗೂ ಸೆರೆ - ರಾಮನಗರ ಸುದ್ದಿ

🎬 Watch Now: Feature Video

By

Published : Jun 20, 2020, 12:35 PM IST

ರಾಮನಗರ: ತಾಲೂಕಿನ ಜೋಗಿದೊಡ್ಡಿ ಗ್ರಾಮದಲ್ಲಿ ಅರಣ್ಯ ಇಲಾಖೆ ಇಟ್ಟಿದ್ದ ಬೋನಿನಲ್ಲಿ ಚಿರತೆ ಸೆರೆಯಾಗಿದೆ. ಆಹಾರ ಅರಿಸಿ ಬರುತ್ತಿದ್ದ‌ ಚಿರತೆ ಸದಾ‌ ಅಕ್ಕ ಪಕ್ಕದ‌ ಗ್ರಾಮಸ್ಥರ ನಿದ್ದೆಗೆಡಿಸಿತ್ತು. ಸಾಕು ಪ್ರಾಣಿಗಳನ್ನು ತಿಂದು ಉಪಟಳ ‌ನೀಡುತ್ತಿದ್ದ ಚಿರತೆ ಸೆರೆಗೆ ಅರಣ್ಯ ಇಲಾಖೆಗೆ ಗ್ರಾಮಸ್ಥರು ಹಲವು‌ ಬಾರಿ ದೂರು ನೀಡಿದ್ದರು. ಸ್ಥಳೀಯರ ಒತ್ತಾಯದ ಮೇರೆಗೆ ಅರಣ್ಯ ಇಲಾಖೆ ಜೋಗಿದೊಡ್ಡಿಯಲ್ಲಿ ಬೋನಿಟ್ಟಿತ್ತು. ಇಂದು ಬೆಳಗಿನ ಜಾವ ಬೋನಿನಲ್ಲಿ ಚಿರತೆ ಸೆರೆಯಾಗಿದೆ. ಇದೇ ಚಿರತೆ ಕಳೆದ ನಾಲ್ಕು ದಿನಗಳ ಹಿಂದೆ ಓರ್ವ ವ್ಯಕ್ತಿಯ ಮೇಲೆ ದಾಳಿ ಮಾಡಿ ಸ್ಥಳೀಯರಲ್ಲಿ ಆತಂಕ ಹುಟ್ಟಿಸಿತ್ತು. ಇದೀಗ ಚಿರತೆ ಸೆರೆಯಿಂದ ಗ್ರಾಮಸ್ಥರು ನಿಟ್ಟುಸಿರು ಬಿಟ್ಟಿದ್ದಾರೆ. ರಾಮನಗರ ಗ್ರಾಮಾಂತರ ಪೋಲಿಸ್‌ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಸ್ಥಳಕ್ಕೆ‌ ಅರಣ್ಯಾಧಿಕಾರಿಗಳು ಭೇಟಿ ನೀಡಿ ಪರಿಶೀಲನೆ‌ ನಡೆಸಿದ್ದಾರೆ.

ABOUT THE AUTHOR

...view details