ಕರ್ನಾಟಕ

karnataka

ETV Bharat / videos

ವಿಡಿಯೋ: ನಾಯಿ ಮೇಲೆ ದಾಳಿ ಮಾಡಲು ಬಂದ ಚಿರತೆ, ಮರಿ ಹೊತ್ತುಕೊಂಡು ಪರಾರಿ - uttar kannada news

By

Published : Oct 17, 2020, 2:33 PM IST

ನಾಯಿ ಹಿಡಿಯಲು ಬಂದಿದ್ದ ಚಿರತೆಯೊಂದು ನಾಯಿ ಮರಿಯನ್ನು ಹೊತ್ತೊಯ್ದ ಘಟನೆ ಕಾರವಾರದಲ್ಲಿ ನಡೆದಿದೆ. ನಗರದ ಬೈತಖೋಲದ ಇಂಡಿಯನ್ ಆಯಿಲ್ ಕಚೇರಿಯ ಬಳಿ ಘಟನೆ ನಡೆದಿದ್ದು, ಈ ದೃಶ್ಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ. ತಡರಾತ್ರಿ ನಾಯಿ ತನ್ನ ಮರಿಗಳೊಂದಿಗೆ ಮಲಗಿದ್ದ ವೇಳೆ ಏಕಾಏಕಿ ಮೇಲೆರಗಿದ ಚಿರತೆ, ಮರಿಯನ್ನು ಹೊತ್ತೊಯ್ದಿದೆ. ನಾಯಿ ಮೇಲೆ ದಾಳಿ ಮಾಡಲು ಬಂದ ಚಿರತೆ ನಾಯಿಯನ್ನು ಬಿಟ್ಟು ಪಕ್ಕದಲ್ಲಿದ್ದ ಮರಿಯನ್ನು ಹೊತ್ತುಕೊಂಡು ಅಲ್ಲಿಂದ ಪರಾರಿಯಾಗಿದೆ. ಈ ಘಟನೆ ನಡೆದ ಸ್ಥಳದ ಪಕ್ಕದಲ್ಲೇ ಜನವಸತಿ ಪ್ರದೇಶವಿದ್ದು, ಚಿರತೆ ಪ್ರತ್ಯಕ್ಷದಿಂದ ಜನತೆ ಆತಂಕಕ್ಕೆ ಒಳಗಾಗಿದ್ದಾರೆ.

ABOUT THE AUTHOR

...view details