ಉಡುಪಿ: ಸೀಲ್ಡೌನ್ ಪ್ರದೇಶಗಳಿಗೆ ತೆರಳಿ ದಿನಸಿ ವಿತರಿಸಿದ ಮುಖಂಡರು..! - Leaders delivering groceries to seal-down areas
ಉಡುಪಿ: ಜಿಲ್ಲೆಯಲ್ಲಿ ಕೊರೊನಾ ವೈರಸ್ ದಿನ ಕಳೆದಂತೆ ಹೆಚ್ಚಾಗುತ್ತಿದ್ದು, ಜಿಲ್ಲೆಯಲ್ಲಿ ದಿನಕ್ಕೆ ಎರಡು ಸಾವಿರಕ್ಕೂ ಹೆಚ್ಚು ಜನರ ಟೆಸ್ಟ್ ನಡೆಯುತ್ತಿದೆ. ಇದೀಗ ಹೋಂ ಕ್ವಾರಂಟೈನ್ಗಳ ಸಂಖ್ಯೆಯೂ ಹೆಚ್ಚುತ್ತಿದ್ದು, ಕೆಲವೊಂದು ಕಡೆ ಆಹಾರ ಸಮಸ್ಯೆಗಳು ಉಂಟಾಗುತ್ತಿದೆ. ಈ ಹಿನ್ನೆಲೆ ಕೆಲ ಪ್ರಮುಖರು ಸೀಲ್ಡೌನ್ ಪ್ರದೇಶಗಳಿಗೆ ತೆರಳಿ ದಿನಸಿ ಸಾಮಗ್ರಿ ವಿತರಿಸುತ್ತಿದ್ದಾರೆ. ಗ್ರಾಮ ಪಂಚಾಯತ್ ಅಧ್ಯಕ್ಷ ಉದ್ಯಮಿ ಅಂಡಾರು ದೇವಿಪ್ರಸಾದ್ ಶೆಟ್ಟಿಯವರು ಇಂತಹ ಕಾರ್ಯದಲ್ಲಿ ಮುಂಚೂಣಿಯಲ್ಲಿದ್ದು, ಸುಮಾರು 500 ಕ್ಕೂ ಹೆಚ್ಚು ಕಿಟ್ಗಳನ್ನು ವಿತರಿಸಿದ್ದಾರೆ.