ಸೂಫಾ ಜಲಾಶಯದಲ್ಲಿ ಭೂ ಕುಸಿತ: ಸ್ಥಳೀಯರಲ್ಲಿ ಮನೆ ಮಾಡಿದ ಆತಂಕ - ಜೋಯಿಡಾ ತಾಲೂಕಿನ ಸೂಫಾ ಜಲಾಶy
ಉತ್ತರ ಕನ್ನಡ ಜಿಲ್ಲೆಯ ಜೋಯಿಡಾ ತಾಲೂಕಿನ ಸೂಫಾ ಜಲಾಶಯದ ಸಮೀಪ ಭೂಕುಸಿತ ಉಂಟಾಗಿದ್ದು ಸ್ಥಳೀಯರಲ್ಲಿ ಆತಂಕ ಹೆಚ್ಚಿಸಿದೆ. ಜಲಾಶಯದಿಂದ ನೀರು ಬಿಡುಗಡೆ ಹಿನ್ನೆಲೆಯಲ್ಲಿ ಕೆಳಭಾಗದ ರಸ್ತೆ ಮತ್ತೆ ಕುಸಿಯತ್ತಿರುವುದು ಸ್ಥಳಿಯರಲ್ಲಿ ಆತಂಕಕ್ಕೆ ಕಾರಣವಾಗಿದೆ. ಜಲಾಶಯದ ಕೆಳಭಾಗದ ವಿದ್ಯುತ್ ಗಾರಕ್ಕೆ ಹೋಗುವ ರಸ್ತೆಯಲ್ಲಿ ಕುಸಿತ ಕಂಡಿದೆ. ಜಲಾಶಯದಲ್ಲಿ 4652.04 ಒಳ ಹರಿವಿದ್ದು, 3176.09 ಕ್ಯೂಸೆಕ್ ನೀರು ಹೊರಕ್ಕೆ ಬಿಡಲಾಗಿದೆ. ಈ ಹಿಂದೆಯೂ ನೀರು ಹೊರಬಿಟ್ಟಾಗ ರಸ್ತೆ ಸ್ವಲ್ಪ ಪ್ರಮಾಣದಲ್ಲಿ ಕುಸಿತ ಕಂಡಿತ್ತು ಎನ್ನಲಾಗಿದೆ.