ಹುತಾತ್ಮ ಯೋಧ ರಾಹುಲ್ ಕುಟುಂಬಕ್ಕೆ ಶಾಸಕಿ ಹೆಬ್ಬಾಳ್ಕರ್ ಸಾಂತ್ವನ - latest belagavi rahul sulagekara news
ಹುತಾತ್ಮ ಯೋಧ ರಾಹುಲ್ ಸುಳಗೇಕರ ಕುಟುಂಬಕ್ಕೆ ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಸಾಂತ್ವನ ಹೇಳಿದ್ದಾರೆ. ನಿಮ್ಮ ಜೊತೆ ಇಡೀ ದೇಶವೇ ಇದೆ. ಮಹಾನ್ ಯೋಧ ಭಾರತಕ್ಕಾಗಿ ಪ್ರಾಣ ನೀಡಿದ್ದು ನಮ್ಮ ಹೆಮ್ಮೆ ಎಂದು ಅವರು ಮೃತ ಯೋಧನ ತಾಯಿಗೆ ಸಮಾಧಾನದ ಮಾತುಗಳನ್ನು ಹೇಳಿದ್ರು. ಪಾಕ್ ಉಗ್ರರ ಗುಂಡಿನ ದಾಳಿಗೆ ಜಮ್ಮು-ಕಾಶ್ಮೀರದ ಕೃಷ್ಣಘಾಟಿ ಸೆಕ್ಟರ್ನಲ್ಲಿ ರಾಹುಲ್ ಹುತಾತ್ಮರಾಗಿದ್ದರು. ಇಂದು ಸ್ವಗ್ರಾಮಕ್ಕೆ ಯೋಧ ರಾಹುಲ್ ಪಾರ್ಥಿವ ಶರೀರ ಆಗಮಿಸಿದ್ದು ಕುಟುಂಬದವರ ಆಕ್ರಂದನ ಮುಗಿಲುಮುಟ್ಟಿತ್ತು.
TAGGED:
latest belagavi news