ಔಪಚಾರಿಕವಾಗಿ ಚುನಾವಣೆ ನಡೆಯುತ್ತಿದೆ, ಲಕ್ಷ್ಮಣ್ ಸವದಿ ಈಗಾಗಲೇ ಗೆದ್ದಿದ್ದಾರೆ: ಸಿಎಂ ಯಡಿಯೂರಪ್ಪ - ಸಿಎಂ ಯಡಿಯೂರಪ್ಪ ಲೆಟೆಸ್ಟ್ ನ್ಯೂಸ್
ಬೆಂಗಳೂರು: ಇಂದು ಪರಿಷತ್ತಿನ ಒಂದು ಸ್ಥಾನಕ್ಕೆ ಮತದಾನ ನಡೆಯುತ್ತಿದ್ದು, ಮತಚಲಾವಣೆ ಬಳಿಕ ಮಾತನಾಡಿದ ಸಿಎಂ ಯಡಿಯೂರಪ್ಪ, ಈಗ ಕೇವಲ ಔಪಚಾರಿಕ ಚುನಾವಣೆ ನಡೆಯುತ್ತಿದೆ. ಪಕ್ಷೇತರ ಅಭ್ಯರ್ಥಿ ಸ್ಪರ್ಧೆಯಿಂದ ಹಿಂದೆ ಸರಿದಿದ್ದಾರೆ. ನಮ್ಮ ಸದಸ್ಯರು ಬಂದು ಮತದಾನ ಮಾಡುತ್ತಿದ್ದು, ಅತೀ ದೊಡ್ಡ ಅಂತರದಲ್ಲಿ ಸವದಿ ಗೆಲ್ಲುತ್ತಾರೆ. ಕಾಂಗ್ರೆಸ್ ಜೆಡಿಎಸ್ ಬೆಂಬಲ ಕೊಡಬೇಕು. ಅವಿರೋಧವಾಗಿ ಆಯ್ಕೆ ಆಗಬೇಕಿತ್ತು. ಈಗಲಾದ್ರು ಕಾಂಗ್ರೆಸ್ ಜೆಡಿಎಸ್ ಬೆಂಬಲ ಕೊಡಲಿ ಎಂದು ತಿಳಿಸಿದರು.