ಅಯೋಧ್ಯೆಯಲ್ಲಿ ರಾಮಮಂದಿರ ಶಿಲಾನ್ಯಾಸ: ಪೇಜಾವರ ಶ್ರೀಗಳಿಂದ ಲಕ್ಷ ತುಳಸಿ ಅರ್ಚನೆ - ಪೇಜಾವರ ಶ್ರೀ ರಾಮಮಂದಿರ
ಉಡುಪಿ: ಅಯೋಧ್ಯೆಯಲ್ಲಿ ರಾಮಮಂದಿರ ಶಿಲಾನ್ಯಾಸ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಪೇಜಾವರ ಶ್ರೀಗಳಿಂದ ರಾಮವಿಠಲ ದೇವರಿಗೆ ಲಕ್ಷ ತುಳಸಿ ಅರ್ಚನೆಗೆ ಸಿದ್ಧತೆ ನಡೆಯುತ್ತಿದೆ. ನೀಲಾವರ ಗೋಶಾಲೆಯ ಮಠದ ರಾಮ ವಿಠಲ ದೇವರಿಗೆ ಶ್ರೀರಾಮ ಜನ್ಮಭೂಮಿ ಟ್ರಸ್ಟ್ ವಿಶ್ವಸ್ಥರಾಗಿರುವ ಪೇಜಾವರ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿಯಿಂದ ರಾಮ ಮಂತ್ರ, ಮುಖ್ಯ ಪ್ರಾಣ ಮಂತ್ರ ಸಹಿತ ನವಗ್ರಹ ಯಾಗ ಹಾಗೂ ಧಾರ್ಮಿಕ ಕಾರ್ಯಕ್ರಮ ನಡೆಯುತ್ತಿದೆ. ಪೇಜಾವರ ಮಠದಲ್ಲಿಯೂ ಸಹ ರಾಮಜಪ, ಭಜನೆ ಸಂಕೀರ್ತನೆ ನೆರವೇರುತ್ತಿದೆ.