ನನ್ನ ಹೆಸರು ಯಾಕೆ ಎಳೆದು ತರುತ್ತಿದ್ದಾರೆ ಗೊತ್ತಿಲ್ಲ: ಲಕ್ಷ್ಮಿ ಹೆಬ್ಬಾಳ್ಕರ್ - ಹುಬ್ಬಳ್ಳಿ
ಹುಬ್ಬಳ್ಳಿ: ಸಿಡಿ ವಿಚಾರದಲ್ಲಿ ನಾನೇನೂ ಮಾತನಾಡಲ್ಲ, ಬೇರೆ ವಿಚಾರದ ಪ್ರಶ್ನೆ ಇದ್ರೆ ಕೇಳಿ ಎಂದು ಮಾಧ್ಯಮದವರಿಗೆ ಕೈ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದ್ದಾರೆ. ಅಲ್ಲದೆ ಗೋಕಾಕ ಪ್ರತಿಭಟನೆಯಲ್ಲಿ ನನ್ನ ಹೆಸರು ಯಾಕೆ ಎಳೆದು ತರುತ್ತಿದ್ದಾರೋ ಗೊತ್ತಿಲ್ಲ. ನಾವು ರಾಜಕಾರಣಿಗಳು ಇನ್ನೊಬ್ಬರಿಗೆ ಉದಾಹರಣೆ ಆಗುವ ಹಾಗೆ ಇರಬೇಕು. ತನಿಖೆ ಪೂರ್ತಿ ಆಗಲಿ, ಎಲ್ಲವೂ ಗೊತ್ತಾಗಲಿದೆ ಎಂದಿದ್ದಾರೆ.