ಇತಿಹಾಸ ಪ್ರಸಿದ್ಧ ಪುತ್ತೂರು ಶ್ರೀ ಮಹಾಲಿಂಗೇಶ್ವರನಿಗೆ ಲಕ್ಷದೀಪೋತ್ಸವ ಸಂಭ್ರಮ - lakhashadeepostava celebration
ಕಾರ್ತಿಕ ಮಾಸದಲ್ಲಿ ನಡೆಯುವ ಲಕ್ಷದೀಪೋತ್ಸವ ಸಂಭ್ರಮ ಇತಿಹಾಸ ಪ್ರಸಿದ್ಧ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ದೇವಳದ ತಂತ್ರಿ ಬ್ರಹ್ಮಶ್ರೀ ಕುಂಟಾರು ರವೀಶ ತಂತ್ರಿಯವರ ನೇತೃತ್ವದಲ್ಲಿ ಶ್ರೀ ದೇವರ ವಿಶೇಷ ಉತ್ಸವದೊಂದಿಗೆ ಆರಂಭಗೊಂಡಿತ್ತು. ದೇವಸ್ಥಾನದ ಒಳಗಾಂಗಣ, ಹೊರಾಂಗಣ, ರಥಬೀದಿಯಲ್ಲಿ ಸಾವಿರಾರು ಮಂದಿ ಭಕ್ತರು ಹಣತೆ ಬೆಳಗಿಸಿ ದೀಪೋತ್ಸವದಲ್ಲಿ ಸಂಭ್ರಮಿಸಿದರು. ದೇವಳದ ರಾಜಗೋಪುರ, ದೇವಸ್ಥಾನದಲ್ಲಿ ಜಗಮಗಿಸುವ ವಿದ್ಯುತ್ ದೀಪಾಲಂಕೃತಗಳ ಜೊತೆಗೆ ಭಕ್ತರು ರಥ ಬೀದಿಯಲ್ಲಿ ಬೆಳಗಿಸಿದ ಹಣತೆಗಳ ಬೆಳಕು ಕಂಗೊಳಿಸುತ್ತಿತ್ತು. ಲಕ್ಷ ದೀಪೋತ್ಸವ ಪ್ರಯುಕ್ತ ನೂರಾರು ಮಂದಿ ಸ್ವಚ್ಛತಾ ಸೇನಾನಿಗಳು ನಿತ್ಯ ಕರಸೇವಕರು ಕ್ಷೇತ್ರದ ಸ್ವಚ್ಛತೆ ಕಾಪಾಡುವಲ್ಲಿ ಮಹತ್ತರ ಪಾತ್ರ ವಹಿಸಿದ್ದಾರೆ. ದೇವಸ್ಥಾನದ ಮುಂಭಾಗ ನಿತ್ಯ ಕರಸೇವಕರು ಹಣತೆ ದೀಪಗಳನ್ನು ಜೋಡಿಸುವಲ್ಲಿ ಸಹಕರಿಸಿದ್ದಾರೆ.