ಲೇಡಿ ಎಸ್ ಐ ಮಾನವೀಯ ಕಾರ್ಯ: ಹೆಣ ಹೊತ್ತು ಕರ್ತವ್ಯ ನಿಷ್ಠೆ ಮೆರೆದ ಸಿರಿಶಾ! - ಲಲಿತಾ ಚಾರಿಟೇಬಲ್ ಟ್ರಸ್ಟ್
ಆಂಧ್ರ ಪ್ರದೇಶ: ಕಾಸಿಬುಗ್ಗ ಪುರಸಭೆಯ ಅದವಿಕೊಟ್ಟೂರು ಗ್ರಾಮದ ಜಮೀನಿನಲ್ಲಿ ಅಪರಿಚಿತ ವೃದ್ಧೆಯ ಶವ ಪತ್ತೆಯಾಗಿದೆ. ದುರಂತ ಎಂದರೆ ಆ ಶವವನ್ನು ಸಾಗಿಸಲು ಯಾರೊಬ್ಬರೂ ಮುಂದೆ ಬಂದಿಲ್ಲ. ತಕ್ಷಣವೇ ಹಿಂದೆ ಮುಂದೆ ನೋಡದೇ ಮಹಿಳಾ ಎಸ್ ಐ ಹೆಣವನ್ನು ಹೊತ್ತು ಲಲಿತಾ ಚಾರಿಟಬಲ್ ಟ್ರಸ್ಟ್‌ಗೆ ಹಸ್ತಾಂತರಿಸಿದ್ದಾರೆ. ಈ ಮಹಿಳಾ ಎಸ್ ಐ ಸಿರಿಶಾ ಕಾರ್ಯಕ್ಕೆ ಉನ್ನತ ಅಧಿಕಾರಿಗಳು ಶ್ಲಾಘಿಸಿದ್ದಾರೆ.