ಆದಿವಾಸಿಗಳ ಸೌಲಭ್ಯ ಕಸಿಯುತ್ತಿರುವ ಮತಾಂತರ... ವಂಚನೆಗೊಳಗಾಗುತ್ತಿದೆಯೇ ಮೂಲ ಸಮುದಾಯ? - ವಂಚನೆಗೊಳಗಾದ ಮೂಲ ಸಮುದಾಯ
ಅದೆಷ್ಟೋ ದಶಕಗಳಿಂದ ಬುಡಕಟ್ಟು ಸಮುದಾಯಗಳು ಉತ್ತರ ಕನ್ನಡ ಜಿಲ್ಲೆಯಲ್ಲಿ ಇಂದಿಗೂ ಜೀವನ ನಡೆಸುತ್ತಿವೆ. ಇಂತಹ ಆದಿವಾಸಿಗಳ ಅಭಿವೃದ್ಧಿಗೋಸ್ಕರ ಸರ್ಕಾರವೂ ಹತ್ತು ಹಲವು ಯೋಜನೆಗಳನ್ನು ರೂಪಿಸಿ ಮುಖ್ಯವಾಹಿನಿಗೆ ತರಲು ಪ್ರಯತ್ನಿಸುತ್ತಿದೆ. ಈ ನಡುವೆ ಆಸೆ, ಆಮಿಷಗಳಿಗೆ ಬಲಿಯಾಗಿ ವಿವಿಧ ಧರ್ಮಗಳಿಗೆ ಮತಾಂತರಗೊಂಡವರು ಇದೀಗ ಪರಿಶಿಷ್ಟ ಪಂಗಡಗಳಿಗೆ ಸಲ್ಲಬೇಕಾದ ಸೌಲಭ್ಯಗಳನ್ನು ಪಡೆಯುತ್ತಿದ್ದು, ಮೂಲ ಸಮುದಾಯದವರು ವಂಚನೆಗೊಳಗಾಗಬೇಕಾದ ಸ್ಥಿತಿ ನಿರ್ಮಾಣವಾಗಿದೆ.