ದಾವಣಗೆರೆಯಲ್ಲಿ ಕೋವಿಡ್ ವ್ಯಾಕ್ಸಿನ್ ಖಾಲಿ : ಗ್ರೌಂಡ್ ರಿಪೋರ್ಟ್ - Davangere
ದಾವಣಗೆರೆ : ಜಿಲ್ಲೆಯಲ್ಲಿ ವ್ಯಾಕ್ಸಿನ್ ಅಭಾವ ಎದುರಾಗಿದೆ. ಹಾಗಾಗಿ, ನಗರದ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ವ್ಯಾಕ್ಸಿನ್ ಇಲ್ಲ ಎಂಬ ನಾಮಫಲಕಗಳನ್ನು ಅಂಟಿಸಲಾಗಿದೆ. ದಾವಣಗೆರೆ ನಗರದ ನಿಟ್ಟುವಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಸಾಕಷ್ಟು ಜನ ವ್ಯಾಕ್ಸಿನ್ಗಾಗಿ ಆಗಮಿಸುತ್ತಿದ್ದು, ವ್ಯಾಕ್ಸಿನ್ ಇಲ್ಲದೆ ಸರ್ಕಾರಕ್ಕೆ ಹಿಡಿಶಾಪ ಹಾಕುತ್ತ ಬಂದ ದಾರಿಗೆ ಸುಂಕವಿಲ್ಲ ಎಂಬಂತೆ ಹಿಂದಿರುಗುತ್ತಿದ್ದಾರೆ. ವ್ಯಾಕ್ಸಿನ್ ಅಭಾವ ಆಗಿದೆ. ಸಾರ್ವಜನಿಕರು ಸಹಕರಿಸಬೇಕೆಂದು ಖುದ್ದು ಡಿಸಿ ಮಹಾಂತೇಶ್ ಬೀಳಗಿಯವರೇ ಜನರಲ್ಲಿ ಮನವಿ ಮಾಡಿದ್ದಾರೆ.