ಮಳೆಗಾಗಿ ಪ್ರಾರ್ಥನೆ: ಗ್ರಾಮ ದೇವತೆಗಳಿಗೆ ಹರಕೆ ಹೊತ್ತ ಮಹಿಳೆಯರು - womens Prayer for the rain
ಕುಷ್ಟಗಿ: ಈ ವರ್ಷವಾದರೂ ಸಮೃದ್ಧ ಮಳೆಯಾಗಿ ಬೆಳೆ ಬೆಳೆಯಲಿ ಎಂದು ಕುಷ್ಟಗಿ ಪಟ್ಟಣದ 11 ಹಾಗೂ 12ನೇ ವಾರ್ಡ್ನ ಮಹಿಳೆಯರು, ಮಳೆಗಾಗಿ ವಿಶೇಷ ಪ್ರಾರ್ಥನೆಯೊಂದಿಗೆ ಪಟ್ಟಣದ ಗ್ರಾಮದೇವತೆಗಳಿಗೆ ಜಲಾಭಿಷೇಕ, ಉಡಿ ತುಂಬುವ ವಿಶೇಷ ಪೂಜೆ ನೆರವೇರಿಸಿದರು. ಬೆಳಗ್ಗೆ ಈ ಎರಡು ವಾರ್ಡ್ಗಳ ಮಹಿಳೆಯರು ಮಾರುತಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದರು. ನಂತರ ಕುಂಭ ಕಳಸದಾರತಿಯೊಂದಿಗೆ ಮೆರವಣಿಗೆ ನಡೆಸಿ ಪಟ್ಟಣದ ಗ್ರಾಮ ದೇವತೆಗಳಾದ ಶ್ರೀ ಸುಂಕ್ಲಮ್ಮ ದೇವಿ, ದ್ಯಾಮವ್ವ, ಕಟ್ಟಿ ದುರ್ಗಾದೇವಿ, ಕಾಳಮ್ಮ, ಬನ್ನಿಕಟ್ಟಿ ಕಾಳಮ್ಮ ದೇವಿ ದೇವಸ್ಥಾನಗಳಿಗೆ ಸಂಚರಿಸಿ, ದೇವಿ ಮೂರ್ತಿಗೆ ಪೂರ್ಣ ಕುಂಭ ನೀರಿನಿಂದ ಜಲಾಭಿಷೇಕ ಸೇವೆ ಸಲ್ಲಿಸಿ ಕಳಸದಾರತಿ ಬೆಳಗಿದರು.