ಕೊಪ್ಪಳದ ಖುಷಿ ಆಸ್ಪತ್ರೆಗೆ ಬಂದಿದ್ದ ಕೊರೊನಾ ಸೋಂಕಿತ.. ಹಾಸ್ಪಿಟಲ್ ಸೀಲ್‌ಡೌನ್ - ಖುಷಿ ಆಸ್ಪತ್ರೆ
ಬಳ್ಳಾರಿ ಜಿಲ್ಲೆಯ ಕೊರೊನಾ ಸೋಂಕಿತ ಜಿಂದಾಲ್ ಉದ್ಯೋಗಿ ನಗರದ ಖಾಸಗಿ ಆಸ್ಪತ್ರೆಗೆ ಭೇಟಿ ನೀಡಿದ ಹಿನ್ನೆಲೆಯಲ್ಲಿ ಆ ಹಾಸ್ಪಿಟಲ್ ಸೀಲ್‌ಡೌನ್ ಮಾಡಲಾಗಿದೆ. ಕೊಪ್ಪಳ ನಗರದ ಹೊಸಪೇಟೆ ರಸ್ತೆಯ ಖುಷಿ ಆಸ್ಪತ್ರೆಗೆ ದಾಖಲಾಗಿದ್ದ ಸಹೋದರಿಯನ್ನು ನೋಡಲು ಈ ಸೋಂಕಿತ ಬುಧವಾರ ಮಧ್ಯಾಹ್ನ ಬಂದಿದ್ದ. ಎರಡು ದಿನಗಳ ಕಾಲ ಖುಷಿ ಆಸ್ಪತ್ರೆಯಲ್ಲಿಯೇ ಇದ್ದ. ಬಳ್ಳಾರಿ ಜಿಲ್ಲೆಯ ತೋರಣಗಲ್‌ನಲ್ಲಿ ಗಂಟಲು ದ್ರವ ಪರೀಕ್ಷೆ ಮಾದರಿ ನೀಡಿ ಕೊಪ್ಪಳಕ್ಕೆ ಆ ವ್ಯಕ್ತಿ ಬಂದಿದ್ದ. ಈತನಿಗೆ ಕೊರೊನಾ ದೃಢಪಟ್ಟಿರುವ ಹಿನ್ನೆಲೆ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಹಾಗೆಯೇ ಖುಷಿ ಆಸ್ಪತ್ರೆಯನ್ನು ಸೀಲ್‌ಡೌನ್ ಮಾಡಲಾಗಿದೆ.