ಕರ್ನಾಟಕ

karnataka

ಕುರುಬ ಸಮುದಾಯದ ಪಾದಯಾತ್ರೆ ಸ್ವಾಗತಿಸಲು ಸಿಂಗಾರಗೊಂಡ ತುಮಕೂರು

By

Published : Jan 31, 2021, 12:17 PM IST

ಕುರುಬ ಸಮುದಾಯಕ್ಕೆ ಎಸ್ಟಿ ಮೀಸಲಾತಿಗೆ ಆಗ್ರಹಿಸಿ ಕಾಗಿನೆಲೆಯಿಂದ ಬೆಂಗಳೂರಿನವರೆಗೂ ಆರಂಭವಾಗಿರುವ ಪಾದಯಾತ್ರೆಯನ್ನು ಭವ್ಯ ಸ್ವಾಗತ ನೀಡಲು ತುಮಕೂರು ನಗರದಲ್ಲಿ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಈಗಾಗಲೇ ಕಾಗಿನೆಲೆ ಗುರುಪೀಠದ ಶ್ರೀ ನಿರಂಜನಾನಂದಪುರಿ ಸ್ವಾಮೀಜಿ ನೇತೃತ್ವದಲ್ಲಿ ತುಮಕೂರು ಜಿಲ್ಲೆಯನ್ನು ತಲುಪಿರುವ ಪಾದಯಾತ್ರೆಯು ಕಳೆದ ನಾಲ್ಕು ದಿನಗಳಿಂದ ಜಿಲ್ಲೆಯ ಶಿರಾ ತಾಲೂಕಿನ ಭಾಗದಲ್ಲಿ ಸಂಚರಿಸುತ್ತಿದೆ. ತುಮಕೂರು ನಗರಕ್ಕೆ ಪಾದಯಾತ್ರೆ ಬರಲಿದ್ದು ಭವ್ಯವಾಗಿ ಸ್ವಾಗತಿಸಲು ನಗರದಲ್ಲಿ ಹಳದಿ ಬಣ್ಣದ ಧ್ವಜಗಳನ್ನು ಬಳಸಿ ಸಿಂಗರಿಸಲಾಗಿದೆ. ನಗರದ ಎಲ್ಲಾ ವೃತ್ತಗಳನ್ನು ಒಂದು ರೀತಿ ಹಳದಿ ವರ್ಣಮಯವನ್ನಾಗಿಸಲಾಗಿದೆ. ಅಲ್ಲದೇ ಬೃಹತ್ ಕಟೌಟ್​ಗಳನ್ನು ಪ್ರಮುಖ ವೃತ್ತಗಳಲ್ಲಿ ಇರಿಸಲಾಗಿದ್ದು, ಪಾದಯಾತ್ರೆಯನ್ನು ಸ್ವಾಗತಿಸಲು ಸಕಲ ತಯಾರಿ ನಡೆಸಲಾಗಿದೆ.

ABOUT THE AUTHOR

...view details