ಹುಬ್ಬಳ್ಳಿಯಲ್ಲಿ ಅದ್ಧೂರಿಯಾಗಿ ನಡೆದ ಶ್ರೀ ದುರ್ಗಾದೇವಿಯ ಪಾಲಿಕೆ ಉತ್ಸವ
ದಸರಾ ಮಹೋತ್ಸವ, ಶರನ್ನಾವರಾತ್ರಿ ನಿಮಿತ್ತ ಹುಬ್ಬಳಿಯ ತೋರವಿ ಹಕ್ಕಲದ ಶ್ರೀ ದುರ್ಗಾದೇವಿ ದೇವಸ್ಥಾನದ ವತಿಯಿಂದ ಹೊಸೂರಿನ ಗಾಳಿ ದುರ್ಗಮ್ಮ ದೇವಿ ದೇವಸ್ಥಾನದಿಂದ ತೋರವಿ ಹಕ್ಕಲದದ ದೇವಿಯ ಗುಡಿವರೆಗೆ ಪಾಲಿಕೆ ಉತ್ಸವ ನಡೆಯಿತು. ಈ ವೇಳೆ 125 ಮಹಿಳೆಯರು ಕುಂಭ ಹೊತ್ತು ನಡೆದಿರುವುದು ಸಂಭ್ರಮ ಕಳೆ ಹೆಚ್ಚಿಸಿತ್ತು. 61 ವರ್ಷಗಳಿಂದ ಈ ಸಂಪ್ರದಾಯ ನಡೆದುಕೊಂಡು ಬರ್ತಿದ್ದು ಪ್ರತಿ ಮೂರು ವರ್ಷಕ್ಕೊಮ್ಮೆ ಶ್ರೀ ದುರ್ಗಾದೇವಿಯ ಮೂರ್ತಿಯನ್ನು ವಿಶೇಷವಾಗಿ ಶೃಂಗರಿಸಿ ಪ್ರತಿಷ್ಠಾಪನೆ ಮಾಡಲಾಗುತ್ತಿದೆ.