ಸುಬ್ರಹ್ಮಣ್ಯದಲ್ಲಿ ಕುಮಾರಧಾರ ನದಿಗೆ ಪೂಜೆ... ಮನಸೂರೆಗೊಂಡ ದೀಪಾಲಂಕಾರ - ಸುಬ್ರಹ್ಮಣ್ಯದಲ್ಲಿ ಕುಮಾರಧಾರ ನದಿ ಪೂಜೆ
ಕುಕ್ಕೆ ಸುಬ್ರಹ್ಮಣ್ಯದ ಕುಮಾರಧಾರ ನದಿ ತೀರದಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ವತಿಯಿಂದ ಮಕರ ಸಂಕ್ರಾತಿ ಉತ್ಸವದ ಪ್ರಯುಕ್ತ ಕುಮಾರಧಾರ ನದಿ ಪೂಜಾ ಕಾರ್ಯಕ್ರಮ ನಡೆಯಿತು. ರಾಷ್ಟ್ರೀಯ ಸ್ವಯಂ ಸೇವಕ ಸಂಘ ಸುಳ್ಯ ತಾಲೂಕು ಸಂಘ ಚಾಲಕ ಚಂದ್ರಶೇಖರ ತಳೂರು ಬೌದ್ದಿಕ್ ಪೂಜಾ ವಿಧಿ ವಿಧಾನ ನಡೆಸಿಕೊಟ್ಟರು. ಈ ವೇಳೆ ಸ್ಥಳೀಯ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪದಾಧಿಕಾರಿಗಳು, ಕಾರ್ಯಕರ್ತರು ಉಪಸ್ಥಿತರಿದ್ದರು. ಧಾರಾರತಿ ಎಂಬ ವಿಶೇಷ ಕುಮಾರಧಾರ ನದಿ ಪೂಜೆ ನಿಮಿತ್ತ ಮಾಡಲಾಗಿದ್ದ ದೀಪಾಲಂಕಾರ ನೋಡುಗರ ಗಮನ ಸೆಳೆಯಿತು.