ಕೂಡಲಸಂಗಮ ಸಂಪೂರ್ಣ ಜಲಾವೃತ.. ಉಕ್ಕಿ ಹರಿಯುತ್ತಿವೆ ಘಟಪ್ರಭಾ, ಮಲಪ್ರಭಾ, ಕೃಷ್ಣಾ ನದಿಗಳು! - kudalasangama flood
ಮಹಾರಾಷ್ಟ್ರದಲ್ಲಿ ಭಾರಿ ಮಳೆ ಮುಂದುವರೆದಿದ್ದು, ತ್ರಿವೇಣಿ ಸಂಗಮವಾಗಿರುವ ಬಾಗಲಕೋಟೆ ಜಿಲ್ಲೆಯ ಕೂಡಲಸಂಗಮವು ಸಂಪೂರ್ಣ ಜಲಾವೃತಗೊಂಡಿದೆ. ಇಲ್ಲಿನ ಕೃಷ್ಣ, ಘಟಪ್ರಭಾ, ಮಲಪ್ರಭಾ ನದಿಗಳು ತುಂಬಿ ಹರಿಯುತ್ತಿವೆ. ವಿಶ್ವ ಜ್ಯೋತಿ ಬಸವಣ್ಣನವರ ನಾಡು ಹಾಗೂ ಧಾರ್ಮಿಕ ಕ್ಷೇತ್ರ ಕೂಡಲಸಂಗಮದಲ್ಲಿ ನೀರು ನುಗ್ಗಿ ಸಂಗಮನಾಥ ದೇವಾಲಯ ಜಲಾವೃತವಾಗಿದೆ. ಹಿಂದೆದೂ ಬಾರದಷ್ಟು ನೀರು ಬಂದಿರುವ ಪರಿಣಾಮ ದೇವಸ್ಥಾನಕ್ಕೆ ತೆರಳುವ ಪ್ರಮುಖ ರಸ್ತೆ ನೀರಲ್ಲಿ ಮುಳುಗಿದೆ. ಶ್ರಾವಣ ಮಾಸದ ನಿಮಿತ್ಯ ವಿವಿಧ ಪ್ರದೇಶಗಳಿಂದ ಬರುವ ಭಕ್ತರು, ಸಂಗಮನಾಥ ದೇವಾಲಯ ಪ್ರವಾಹ ನೋಡಿ ಬೆಚ್ಚಿ ಬಿದ್ದಿದ್ದಾರೆ. ಈ ಕುರಿತು ಈಟಿವಿ ಭಾರತ ಪ್ರತಿನಿಧಿ ಸಮಗ್ರ ಮಾಹಿತಿ ನೀಡಿದ್ದಾರೆ.